ಉದ್ಭವ ಲಿಂಗಕ್ಕೆ ಜಲದಿಗ್ಬಂಧನ! : ಬಿಳಿಯೂರು ಅಣೆಕಟ್ಟಿನಿಂದ ಸಮಸ್ಯೆ : ಪೂಜಾ ಅವಕಾಶಕ್ಕೆ ಭಕ್ತರ ಆಗ್ರಹ

ನೇತ್ರಾವತಿ ನದಿಗರ್ಭದಲ್ಲಿರುವ ಉದ್ಭವ ಲಿಂಗದ ಸ್ಥಳದ ಸುತ್ತಲೂ ಕೆಂಪು ಮಾರ್ಕ್ ಮಾಡಿರುವುದು.
ನೇತ್ರಾವತಿ ನದಿಗರ್ಭದಲ್ಲಿರುವ ಉದ್ಭವ ಲಿಂಗದ ಸ್ಥಳದ ಸುತ್ತಲೂ ಕೆಂಪು ಮಾರ್ಕ್ ಮಾಡಿರುವುದು.
Published on

ಭಕ್ತರಿಗೆ ಅತೀವ ನಿರಾಸೆ

ಪ್ರಶ್ನಾ ಚಿಂತನೆಯಲ್ಲೂ ಸೂಚನೆ

ಮಾರ್ಚ್ ಮಧ್ಯಂತರವರೆಗೆ ಬೇಡಿಕೆ

ಮಾರ್ಚ್ ಮಧ್ಯಂತರದ ಅವಧಿಯಲ್ಲಿ ಗೇಟಿನ ಗಾತ್ರವನ್ನು ಇಳಿಸುವುದರಿಂದ ಹಾಗೂ ಬಳಿಕ ಗೇಟಿನ ಗಾತ್ರವನ್ನು 4 ಮೀಟರಿಗೆ ಏರಿಸುವುದರಿಂದ ಎಲ್ಲರಿಗೂ ಅನುಕೂಲಕರವೆನಿಸುತ್ತದೆ. ಇದಕ್ಕಾಗಿ ಸರ್ಕಾರದ ಗಮನ ಸೆಳೆಯಲು ಶಾಸಕರಿಗೆ ಮನವಿ ಸಲ್ಲಿಸಲಿದ್ದೇವೆ.

ಉದ್ಭವ ಲಿಂಗಕ್ಕೆ ಅಣೆಕಟ್ಟಿನ ಹಿನ್ನೀರಿನಿಂದಾಗಿ ಪೂಜೆ ನಡೆಯದಿರುವುದು ದೋಷಕರ ಎಂದು ಪ್ರಶ್ನಾಚಿಂತನೆಯಲ್ಲಿ ಗೋಚರಿಸಿರುವುದು ಗಮನಕ್ಕೆ ಬಂದಿದೆ. ಜಾತ್ರೋತ್ಸವದ ಅವಧಿವರೆಗೆ ಅಣೆಕಟ್ಟಿನ ಗೇಟನ್ನು ತಗ್ಗಿಸಿ ಬಳಿಕ ಎತ್ತರಿಸುವ ಸಲಹೆ ಬಗ್ಗೆ ಸಾಧಕ- ಬಾಧಕಗಳನ್ನು ಪರಿಶೀಲಿಸಿ ಸರ್ಕಾರದ ಗಮನ ಸೆಳೆಯಲಾಗುವುದು.

ಕಳೆದೆರಡು ವರ್ಷಗಳಿಂದ ಪೂಜೆ ನಿಂತುಹೋಗಿರುವ ಬಗ್ಗೆ ಕೊಕ್ಕಡ, ಶಿರಾಡಿ ಪ್ರದೇಶದ ಹಿರಿಯರು ಅಸಮಾಧಾನ ವ್ಯಕ್ತಪಡಿಸುತ್ತಾರೆ. ಅಂದು ವಾಹನ ಸೌಲಭ್ಯ ಇಲ್ಲದಿದ್ದರೂ ಮೈಲುಗಟ್ಟಲೆ ನಡೆದೇ ಸಾಗಿ ಶಿವರಾತ್ರಿಯಂದು ಉದ್ಭವ ಲಿಂಗಕ್ಕೆ ಪೂಜೆ ಸಲ್ಲಿಸುತ್ತಿದ್ದರು. ಆದರೆ ಇಂದು ಎಲ್ಲ ಸೌಲಭ್ಯಗಳನ್ನು ದೇವರು ಕೊಟ್ಟರೂ ಉದ್ಭವ ಲಿಂಗಕ್ಕೆ ಪೂಜೆ ಸಲ್ಲಿಕೆ ಸಾಧ್ಯವಾಗದಿರುವುದು ಖೇದಕರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net