40 ಲಕ್ಷ ರೂ.ವೆಚ್ಚದಲ್ಲಿ ಅಭಿವೃದ್ಧಿ ಯೋಜನೆಗೆ ಸಿದ್ಧತೆ : ಎಂ.ಎಚ್.ಅರವಿಂದ ಪೂಂಜ ಮಾಹಿತಿ

ಕಾರ್ನಾಡು ಶ್ರೀ ಧರ್ಮಸ್ಥಾನ ಕ್ಷೇತ್ರದಲ್ಲಿ ಧ್ವಜಸ್ತಂಭ ನಿರ್ಮಾಣದ ಮನವಿ ಪತ್ರ ಬಿಡುಗಡೆ ಮಾಡಲಾಯಿತು.
ಕಾರ್ನಾಡು ಶ್ರೀ ಧರ್ಮಸ್ಥಾನ ಕ್ಷೇತ್ರದಲ್ಲಿ ಧ್ವಜಸ್ತಂಭ ನಿರ್ಮಾಣದ ಮನವಿ ಪತ್ರ ಬಿಡುಗಡೆ ಮಾಡಲಾಯಿತು.
Published on

ಮೂಲ್ಕಿ: ಶ್ರೀ ಉಳ್ಳಾಯ ದೈವ ಹಾಗೂ ಪಂಚಶಕ್ತಿಗಳೊಂದಿಗೆ ಇತರ ಪರಿವಾರ ದೈವಗಳು ನೆಲೆ ನಿಂತಿರುವ ಶ್ರೀ ಕ್ಷೇತ್ರ ಧರ್ಮಸ್ಥಾನದಲ್ಲಿ ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಯೋಜನೆ ನಡೆಸಲು ಉದ್ದೇಶಿಸಲಾಗಿದ್ದು, ಗ್ರಾಮಸ್ಥರು ಹಾಗೂ ದಾನಿಗಳ ಸಹಕಾರ ಅಗತ್ಯವಿದೆ ಎಂದು ಶ್ರೀ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಎಂ.ಎಚ್.ಅರವಿಂದ ಪೂಂಜ ಹೇಳಿದರು.

ಕಾರ್ನಾಡು ಶ್ರೀ ಧರ್ಮಸ್ಥಾನ ಕ್ಷೇತ್ರದ ನೂತನ ಧ್ವಜಸ್ತಂಭ ನಿರ್ಮಾಣ ಹಾಗೂ ಅಭಿವೃದ್ಧಿ ಕಾರ್ಯದ ಮನವಿ ಪತ್ರ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಶ್ರೀಪತಿ ಭಟ್ ಹೊಯ್ಗೆಗುಡ್ಡೆ, ವಾಸ್ತುಶಿಲ್ಪಿ ವಿಷ್ಣುಮೂರ್ತಿ ಭಟ್, ಕ್ಷೇತ್ರದ ಅರ್ಚಕ ಸದಾನಂದ ಪೂಜಾರಿ, ಗುರು ಪ್ರಸಾದ್ ಭಟ್, ಗೋಪಾಲ ನಾಯ್ಗರು, ದೇವದಾಸ ನಾಯ್ಗರು, ಜೀರ್ಣೋದ್ಧಾರ ಸಮಿತಿಯ ಪಾಂಡು ಕಾರ್ನಾಡ್, ಜಗದೀಶ್ ಶೆಟ್ಟಿ, ಕೃಷ್ಣ ಶೆಟ್ಟಿ, ಶಶೀಂದ್ರ ಸಾಲ್ಯಾನ್, ಶರತ್ ಕಾರ್ನಾಡ್, ಲೋಕೇಶ್ ದೇವಾಡಿಗ, ವಾಸು ಕೋಟ್ಯಾನ್, ಜಯ ಸುವರ್ಣ, ಪ್ರವೀಣ್ ಕೋಟ್ಯಾನ್, ದಿವಾಕರ ಕೋಟ್ಯಾನ್, ತನುಶ್ ಮಾಗಂದಡಿ, ಶರತ್ ಕಾರ್ನಾಡ್, ಉದಯಕುಮಾರ್ ಶೆಟ್ಟಿ, ಶ್ರೀ ಧರ್ಮಸ್ಥಾನದ ಯುವಕ ವೃಂದ ಅಧ್ಯಕ್ಷ ಪ್ರಕಾಶ್ ಮಂಜಟ್ಟೆ, ಮಹಿಳಾ ಮಂಡಳಿ ಅಧ್ಯಕ್ಷೆ ಶಶಿಕಲಾ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net