ಕಡಬದ ವ್ಯಾಪಾರಿಗೆ ಹಣಕ್ಕೆ ಬೇಡಿಕೆ, ಜೀವ ಬೆದರಿಕೆ

ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
Published on: 

ಕಡಬ: ಹಣಕ್ಕೆ ಬೇಡಿಕೆ ಇಟ್ಟು ಜೀವ ಬೆದರಿಕೆ ಹಾಕಿದ ಆರೋಪದಡಿ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಟ್ರುಪ್ಪಾಡಿ ಗ್ರಾಮದ ಕೆ.ಎಂ.ಮ್ಯಾಥ್ಯೂ ಎಂಬುವರು ಕಡಬದಲ್ಲಿ ವ್ಯಾಪಾರ ನಡೆಸುತ್ತಿದ್ದು, ಕೋಡಿಂಬಾಳದ ಅನೀಸ್ ಎಂಬವನು ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟು ಜೀವ ಬೆದರಿಕೆ ಹಾಕಿ ಕಡಬ ಪೇಟೆಗೆ ಬರುವಂತೆ ಹೇಳಿದ್ದಾನೆ ಎನ್ನಲಾಗಿದೆ. ಅದರಂತೆ ಕೆ.ಎಂ.ಮ್ಯಾಥ್ಯೂ ಅವರು ಪುತ್ರ ರಕ್ಷಿತ್ ಮಾಣಿ ಜತೆ ಕಡಬ ಪೇಟೆಗೆ ಬಂದಾಗ, ಕಾರಿನಲ್ಲಿ ಬಂದ ವಿಕ್ಟರ್ ಮಾರ್ಟಿಸ್ ಮತ್ತು ಅನೀಸ್ ಹಲ್ಲೆಗೆ ಮುಂದಾಗಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿ ತೆರಳಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಘಟನೆ ಕಾರಿನ ಸಿಸಿ ಕ್ಯಾಮರಾ ಹಾಗೂ ಸಮೀಪದ ಅಂಗಡಿಯ ಕ್ಯಾಮರಾದಲ್ಲಿ ಸೆರೆಯಾಗಿದೆ ಎನ್ನಲಾಗಿದೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.