ಕೈಕಂಬ ಪೊಂಪೈ ದ್ವಾರದ ಎದುರು ಫ್ಲೈಓವರ್‌ಗೆ ಆಗ್ರಹ

 ಬಜ್ಪೆ ವೃತ್ತ ನಿರೀಕ್ಷಕ ಬಾಲಕೃಷ್ಣ ಪ್ರತಿಭಟನಕಾರೊಂದಿಗೆ ಮಾತುಕತೆ ನಡೆಸಿದರು. ಸಮಿತಿಯ ವಿಜಯಾ ಜಿ.ಸುವರ್ಣ, ಹರೀಶ್ ಮಟ್ಟಿ, ಸುರೇಶ್ ಬೆಲ್ಚಡ್, ರಿಯಾಝ್ ಅಡ್ಡೂರು, ಜುಲೆಟ್ ಸೆರವೋ, ಗ್ಲಾಡಿಸ್ ಕ್ವಾಡ್ರಸ್ ಮೊದಲಾದವರಿದ್ದರು.
ಬಜ್ಪೆ ವೃತ್ತ ನಿರೀಕ್ಷಕ ಬಾಲಕೃಷ್ಣ ಪ್ರತಿಭಟನಕಾರೊಂದಿಗೆ ಮಾತುಕತೆ ನಡೆಸಿದರು. ಸಮಿತಿಯ ವಿಜಯಾ ಜಿ.ಸುವರ್ಣ, ಹರೀಶ್ ಮಟ್ಟಿ, ಸುರೇಶ್ ಬೆಲ್ಚಡ್, ರಿಯಾಝ್ ಅಡ್ಡೂರು, ಜುಲೆಟ್ ಸೆರವೋ, ಗ್ಲಾಡಿಸ್ ಕ್ವಾಡ್ರಸ್ ಮೊದಲಾದವರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಗುರುಪುರ
ಚತುಷ್ಪಥವಾಗಿ ವಿಸ್ತರಣೆಗೊಳ್ಳುತ್ತಿರುವ ಮಂಗಳೂರು-ಸೋಲಾಪುರ ರಾಷ್ಟ್ರೀಯ ಹೆದ್ದಾರಿ 169ರ ಗುರುಪುರ-ಕೈಕಂಬದ ಪೊಂಪೈ ದ್ವಾರದ ಬಳಿ ಪಿಲ್ಲರ್ ಅಳವಡಿಸಿ ಓವರ್‌ಪಾಸ್ ನಿರ್ಮಿಸಬೇಕೆಂದು ಆಗ್ರಹಿಸಿ 3 ದಿನಗಳಿಂದ ‘ಕೈಕಂಬ ನಾಗರಿಕ ಹೋರಾಟ ಸಮಿತಿ’ ಗುರುಪುರ ಕೈಕಂಬದಲ್ಲಿ ನಡೆಸುತ್ತಿದ್ದ ಪ್ರತಿಭಟನೆ ಬುಧವಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ
ಬಜ್ಪೆ ಠಾಣಾಧಿಕಾರಿ ಬಾಲಕೃಷ್ಣ ಸ್ಥಳಕ್ಕೆ ಆಗಮಿಸಿ ಪ್ರತಿಭಟನಕಾರರೊಂದಿಗೆ ಮಾತನಾಡಿ, ಗುರುಪುರ-ಕೈಕಂಬದಲ್ಲಿ ಬೃಹತ್ ಓವರ್‌ಪಾಸ್ ಅಥವಾ ಫ್ಲೈಓವರ್ ನಿರ್ಮಿಸುವ ಕುರಿತು ಇನ್ನೆರಡು ದಿನದೊಳಗೆ ಹೆದ್ದಾರಿ ಪ್ರಾಧಿಕಾರದ(ಎನ್‌ಎಚ್) ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವೆ. ಹಾಗಾಗಿ ಈಗ ಪ್ರತಿಭಟನೆ ಕೈಬಿಡಬೇಕು ಎಂದು ಮನವಿ ಮಾಡಿದರು.
ಸಮಿತಿಯ ಮುಂಚೂಣಿಯಲ್ಲಿದ್ದ ವಿಜಯಾ ಜಿ.ಸುವರ್ಣ ಮಾತನಾಡಿ, ಬಜ್ಪೆ ಪೊಲೀಸ್ ಠಾಣೆ ವೃತ್ತ ನಿರೀಕ್ಷಕರ ಮನವಿಗೆ ಬೆಲೆಕೊಟ್ಟು ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆಯುತ್ತಿದ್ದೇವೆ. ನಾವು ನಡೆಸುತ್ತಿರುವ ನ್ಯಾಯೋಚಿತ ಬೇಡಿಕೆಗೆ ಸ್ಪಂದನೆ ಸಿಗದೆ ಹೋದಲ್ಲಿ ಸಮಿತಿ ಮತ್ತೆ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.
ಸಮಿತಿಯ ವಿಜಯಾ ಜಿ.ಸುವರ್ಣ, ಹರೀಶ್ ಮಟ್ಟಿ, ಸುರೇಶ್ ಬೆಲ್ಚಡ್, ರಿಯಾಜ್ ಅಡ್ಡೂರು, ಜುಲೆಟ್ ಸೆರವೋ, ಗ್ಲಾಡಿಸ್ ಕ್ವಾಡ್ರಸ್, ಸಾಹಿಕ್ ಅಡ್ಡೂರು, ವೀಣಾ ಡಿಸೋಜ, ಪ್ರವೀಣ್ ಡಿಸಿಲ್ವ, ಆನಂದ ಬಂಗೇರ, ಶೈಲಾ ಕುಟಿನ್ಹೋ, ಐಡಾ ಕುಟಿನ್ಹೋ, ಗ್ರೇಸ್ ಫರ್ನಾಂಡಿಸ್, ಜಾರ್ಜ್ ಸೆರಾವೋ, ಅಜ್ಮ್ ಕಂದಾವರ, ದಿನೇಶ್ ಕುವೆಲ್ಲೋ, ಸುಜಿತ್ ಡಿಸೋಜ ಮತ್ತಿತರರಿದ್ದರು.

ಫ್ಲೈಓವರ್ ನಿರ್ಮಿಸಲು ಸಾರ್ವಜನಿಕರಿಂದ ಬೇಡಿಕೆ

ಕೈಕಂಬ ಪೇಟೆಯಲ್ಲಿ ಈಗ ಮಧ್ಯೆ ಎತ್ತರದ ಹೆದ್ದಾರಿಯು ಜಂಕ್ಷನ್‌ನಲ್ಲಿ ನಿರ್ಮಿಸಲಾಗುತ್ತಿರುವ ಫ್ಲೈಓವರ್ ಸಂಪರ್ಕಿಸುತ್ತದೆ. ಹೆದ್ದಾರಿಯ ಎರಡು ಪಾರ್ಶ್ವದಲ್ಲಿ ಸರ್ವೀಸ್ ರೋಡ್ ಇದೆ. ಆದರೆ ಪೊಂಪೈ ದ್ವಾರದ ಬಳಿ ಮೇಲ್ಭಾಗದಲ್ಲಿ ಹಾದು ಹೋಗುವ ಹೆದ್ದಾರಿ ಸಂಪೂರ್ಣ ಮುಚ್ಚಲ್ಪಟ್ಟರೆ ಕಂದಾವರ, ಇತರ ಪ್ರದೇಶಗಳ ಸಂಪರ್ಕ ಕಡಿದು ಹೋಗಿ ಸಾರ್ವಜನಿಕರು ಸಮಸ್ಯೆ ಎದುರಿಸಬೇಕಾಗುತ್ತದೆ. ಕೈಕಂಬ ಪೊಂಪೈ ದ್ವಾರದ ಎದುರು ಹೆದ್ದಾರಿಗೆ ತಡೆಗೋಡೆ ಮುಚ್ಚದೆ ಸರ್ವೀಸ್ ರೋಡ್ ಸಂಪರ್ಕದ ಫ್ಲೈಓವರ್ ನಿರ್ಮಿಸಬೇಕು ಎಂಬುದು ಸಾರ್ವಜನಿಕರ ಬೇಡಿಕೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net