_1765367246256.webp?w=480&auto=format%2Ccompress&fit=max)
_1765367246256.webp?w=480&auto=format%2Ccompress&fit=max)
ಬೆಳ್ತಂಗಡಿ: ಉಜಿರೆ ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ 2025ರ ಲಕ್ಷದೀಪೋತ್ಸವಕ್ಕೆ ಸಂಬಂಧಿಸಿದಂತೆ ಹೊರ ತಂದ ‘ದೀಪ ಸಮನ್ವಯ’ ಮತ್ತು ವಿಡಿಯೋ ವಿವರಗಳ ಕ್ಯೂಆರ್ ಕೋಡ್ ಜತೆಗಿನ ‘ದೀಪ ದೃಶ್ಯ’ ವಿಶೇಷ ಸಂಚಿಕೆಗಳನ್ನು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಬಿಡುಗಡೆ ಮಾಡಿದರು.
ಲಕ್ಷದೀಪೋತ್ಸವ ಸಂದರ್ಭದಲ್ಲಿ ಆಯೋಜಿತವಾದ ಪಾದಯಾತ್ರೆ, ಸರ್ವಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನಗಳ ಕುರಿತ ಸಮಗ್ರ ಚಿತ್ರಣವನ್ನೊಳಗೊಂಡ ‘ದೀಪ ಸಮನ್ವಯ’ ಸಂಚಿಕೆ ಮಹತ್ವದ ಪುಟಗಳನ್ನು ವಿದ್ಯಾರ್ಥಿ ಸಂಪಾದಕರ ಸಮ್ಮುಖದಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವಲೋಕಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ.ಭಾಸ್ಕರ ಹೆಗಡೆ ವಿಶೇಷ ಸಂಚಿಕೆಗಳ ಪ್ರಯೋಗಶೀಲತೆ ಹಿನ್ನೆಲೆ ವಿವರಿಸಿದರು. ವಿಶೇಷ ಸಂಚಿಕೆಗಳನ್ನು ಡಾ.ಹೇಮಾವತಿ ಹೆಗ್ಗಡೆ, ಎಸ್‌ಡಿಎಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್ ಅವರಿಗೆ ಸಲ್ಲಿಸಲಾಯಿತು. ಎಸ್‌ಡಿಎಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ಉಪಸ್ಥಿತರಿದ್ದರು.