ದ.ಕ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಲೆಮಾರಿ ಸಮುದಾಯಗಳಾದ ಬೈರ, ನಲಿಕೆ, ಅಜಿಲ, ಕೊರಗ, ಮೈಲ, ಪಂಬದ, ಮಲೆಕುಡಿಯ ಹಾಗೂ ಇತರ ಸಮುದಾಯದವರೊಂದಿಗೆ ಜನಸ್ಪಂದನೆ, ಕುಂದುಕೊರತೆ ಸಭೆ ನಡೆಸಲಾಗಿದೆ. ಹಲವೆಡೆ ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ಸಂಪರ್ಕ ಇಲ್ಲದಿರುವುದು, ರಸ್ತೆ ಸಮಸ್ಯೆ, ಸೇತುವೆ ಇಲ್ಲದಿರುವುದು, ಹಕ್ಕುಪತ್ರ ಇಲ್ಲದೆ ಸಂಕಷ್ಟ ಸಹಿತ ಹಲವಾರು ಸಮಸ್ಯೆಗಳ ಬಗ್ಗೆ ಸ್ಥಳೀಯರು ಸಾಕಷ್ಟು ಅಹವಾಲುಗಳನ್ನು ಸಲ್ಲಿಸಿದ್ದಾರೆ. ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಜತೆಗೆ, ಸಾಲೆತ್ತೂರಿನ ಕೊಲ್ನಾಡು ಗ್ರಾಮದಲ್ಲಿ ಬೈರ ಸಮುದಾಯದ ಕಾಲುದಾರಿಯನ್ನು ನಿಗಮದ ಮೂಲಕ ಮಾಡಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.