ಕಟೀಲು: ಅಜಾರು ಜಲಕದಕಟ್ಟೆ ಸಮೀಪ ತೆಂಗಿನಕಾಯಿ ಕೀಳಲು ಯಂತ್ರದ ಸಹಾಯದಿಂದ ಮರ ಏರಿದ ಜಯರಾಮ ಶೆಟ್ಟಿ(75) ಎಂಬುವರು ಮರದಲ್ಲೇ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ.
ಸುರತ್ಕಲ್‌ನ ಮುಕ್ಕ ಬಳಿ ಫ್ಲಾೃಟ್‌ನಲ್ಲಿ ವಾಸವಾಗಿದ್ದ ಅವರು ಕಟೀಲು ಜಲಕದ ಕಟ್ಟೆ ಸಮೀಪ ಜಮೀನು ಹೊಂದಿದ್ದು, ಬುಧವಾರ ಯಂತ್ರದ ಸಹಾಯದಿಂದ ತೆಂಗಿನಮರಕ್ಕೆ ಏರಿದ್ದರು. ಈ ಸಂದರ್ಭ ಹೃದಯಾಘಾತ ಸಂಭವಿಸಿದೆ. ಸ್ಥಳದಲ್ಲಿ ಯಾರೂ ಇಲ್ಲದ ಕಾರಣ ಘಟನೆ ಯಾರದೇ ಗಮನಕ್ಕೆ ಬಂದಿರಲಿಲ್ಲ. ಸಂಜೆ ತೆಂಗಿನಮರದಲ್ಲಿ ಶವ ನೇತಾಡುತ್ತಿರುವುದನ್ನು ನೆರೆಹೊರೆಯವರು ಗಮನಿಸಿ ಅಗ್ನಿಶಾಮಕದಳ ಮತ್ತು ಬಜ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಗ್ನಿಶಾಮಕದಳದ ಸಿಬ್ಬಂದಿ ಮೃತದೇಹವನ್ನು ಕೆಳಗಿಳಿಸಿದರು. ಜಯರಾಮ ಅವರ ಪತ್ನಿ ಮತ್ತು ಮಕ್ಕಳು ಬೆಂಗಳೂರಿನಲ್ಲಿ ವಾಸವಿದ್ದಾರೆ. ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.