ಜೀವಕ್ಕೆ ಹಾನಿಯಾದರೆ ಎಸಿ ಹೊಣೆ Puttur Protest

ಧರಣಿ ನಿರತ ಕೌಕ್ರಾಡಿ ಕಾಪಿನಬಾಗಿಲು ನಿವಾಸಿ ರಾಧಾಮ್ಮ ಹಾಗೂ ಮುತ್ತು ಸ್ವಾಮಿ ದಂಪತಿ ಮರದ ಕೆಳಗೆ ವಿಶ್ರಾಂತಿ ಪಡೆದುಕೊಳ್ಳುತ್ತಿರುವುದು.
ಧರಣಿ ನಿರತ ಕೌಕ್ರಾಡಿ ಕಾಪಿನಬಾಗಿಲು ನಿವಾಸಿ ರಾಧಾಮ್ಮ ಹಾಗೂ ಮುತ್ತು ಸ್ವಾಮಿ ದಂಪತಿ ಮರದ ಕೆಳಗೆ ವಿಶ್ರಾಂತಿ ಪಡೆದುಕೊಳ್ಳುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಸುಬ್ರಹ್ಮಣ್ಯ ಹೇಳಿಕೆ
  • ೭ನೇ ದಿನದತ್ತ ಆಹೋರಾತ್ರಿ ಧರಣಿ
ಪುತ್ತೂರು: ಮನೆ ಕಳೆದುಕೊಂಡ ಕೌಕ್ರಾಡಿ ಕಾಪಿನಬಾಗಿಲು ನಿವಾಸಿ ರಾಧಾಮ್ಮ ಹಾಗೂ ಮುತ್ತು ಸ್ವಾಮಿ ದಂಪತಿ ನ್ಯಾಯಕ್ಕಾಗಿ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ನಡೆಸುತ್ತಿರುವ ಆಹೋರಾತ್ರಿ ಧರಣಿ ೬ನೇ ದಿನ ಪೂರೈಸಿದೆ.
ಪುತ್ರ ಸುಬ್ರಹ್ಮಣ್ಯ ಮಾತನಾಡಿ, ತಿಂಗಳ ಹಿಂದೆಯೇ ಧರಣಿ ಕೂರುವ ಬಗ್ಗೆ ಕಚೇರಿಗೆ ಪತ್ರ ನೀಡಿದ್ದು, ಉತ್ತರ ನೀಡುವ ಕಾರ್ಯ ಇನ್ನೂ ನಡೆಯಲಿಲ್ಲ. ಕಟ್ಟಿದ ಮನೆಯನ್ನು ಒಡೆದು ಹಾಕಿ, ಈಗ ಅರ್ಜಿ ನೀಡಿ ಎನ್ನುವುದು ಎಷ್ಟು ಸರಿಯಾಗಿದೆ. ವಾಸ್ತವ್ಯವಿದ್ದ ಜಾಗವನ್ನು ೬೦ ವರ್ಷಗಳಿಂದ ಅನುಭವಿಸಿಕೊಂಡು ಬಂದಿದ್ದೇವೆ. ೧೩ ದಿನವಾದರೂ ಮನೆಯಿದ್ದ ಸ್ಥಳಕ್ಕೆ ಯಾವ ಅಽಕಾರಿಯೂ ತನಿಖೆಗೆ ಹೋಗಿಲ್ಲ. ಎರಡು ದಿನದಲ್ಲಿ ನ್ಯಾಯ ಸಿಗದಿದ್ದರೆ, ಉಪವಾಸ ಪ್ರಾರಂಭಿಸುತ್ತೇವೆ. ಜೀವಕ್ಕೆ ಹಾನಿಯಾದರೆ, ಸಹಾಯಕ ಆಯುಕ್ತರೇ ನೇರ ಹೊಣೆ ಎಂದು ಎಚ್ಚರಿಕೆ ನೀಡಿದ್ದಾರೆ.
ನೀತಿ ತಂಡ ಜಯಂತ ಟಿ. ಮಾತನಾಡಿ, ವೃದ್ಧ ದಂಪತಿ ಮನೆ ಅಡಿ ಸ್ಥಳವನ್ನು ಸಕ್ರಮ ಮಾಡಿಕೊಳ್ಳುವ ನಿಟ್ಟಿನಲ್ಲಿ ೨೦೨೧ರಲ್ಲಿ ಮೇ ೫ರಂದು ೯೪ ಸಿ ಅಲ್ಲಿ ಅರ್ಜಿ ಸಲ್ಲಿಸಿದ್ದರು. ಎರಡು ವರ್ಷದ ಬಳಿಕ ೨೦೨೩ ನವೆಂಬರ್ ೨೯ರಂದು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ ಎಂದು ತಿಳಿಸಿದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net