ಧರಣಿ ನಿರತರ ಆರೋಗ್ಯದಲ್ಲಿ ಏರುಪೇರು Puttur Protest

ತಾಲೂಕು ಆಡಳಿತದ ಮುಂಭಾಗದ ಮರದ ಕೆಳಗೆ ಧರಣಿ ನಡೆಸುತ್ತಿರುವ ಕೌಕ್ರಾಡಿ ಕಾಪಿನಬಾಗಿಲು ನಿವಾಸಿ ರಾಧಾಮ್ಮ ಹಾಗೂ ಮುತ್ತು ಸ್ವಾಮಿ ದಂಪತಿ ಹಾಗೂ ಪುತ್ರ ಸುಬ್ರಹ್ಮಣ್ಯ ರಾತ್ರಿ ವಿಶ್ರಾಂತಿ ಮಾಡುತ್ತಿರುವುದು.
ತಾಲೂಕು ಆಡಳಿತದ ಮುಂಭಾಗದ ಮರದ ಕೆಳಗೆ ಧರಣಿ ನಡೆಸುತ್ತಿರುವ ಕೌಕ್ರಾಡಿ ಕಾಪಿನಬಾಗಿಲು ನಿವಾಸಿ ರಾಧಾಮ್ಮ ಹಾಗೂ ಮುತ್ತು ಸ್ವಾಮಿ ದಂಪತಿ ಹಾಗೂ ಪುತ್ರ ಸುಬ್ರಹ್ಮಣ್ಯ ರಾತ್ರಿ ವಿಶ್ರಾಂತಿ ಮಾಡುತ್ತಿರುವುದು.
Published on
ಪುತ್ತೂರು: ಅಧಿಕಾರಿಗಳ ದೌರ್ಜನ್ಯದಿಂದ ಮನೆ ಕಳೆದುಕೊಂಡ ಕೌಕ್ರಾಡಿ ಕಾಪಿನಬಾಗಿಲು ನಿವಾಸಿ ರಾಧಾಮ್ಮ ಹಾಗೂ ಮುತ್ತು ಸ್ವಾಮಿ ದಂಪತಿ ನ್ಯಾಯಕ್ಕಾಗಿ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ನಡೆಸುತ್ತಿರುವ ಆಹೋರಾತ್ರಿ ಧರಣಿ ಐದನೇ ದಿನ ಪೂರೈಸಿದ್ದು, ಆರೋಗ್ಯದಲ್ಲಿ ಏರುಪೇರಾಗಲಾರಂಭಿಸಿದೆ.
ನಿರಂತರವಾಗಿ ಇಬ್ಬನಿ ಹಾಗೂ ಕೊರೆಯುವ ಚಳಿಗೆ ರಾತ್ರಿ ಹಗಲು ಮರದ ಕೆಳಗೆ ಕುಳಿತು ನ್ಯಾಯ ಆಗ್ರಹಿಸುತ್ತಿದ್ದಾರೆ. ಇಬ್ಬನಿ ಹಾಗೂ ಬಿಸಿಲಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದು, ಸ್ಥಳದಲ್ಲೇ ಔಷದೋಪಚಾರ ಮಾಡಿಕೊಂಡು ಬೆಳಗ್ಗೆಯೂ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಐದು ದಿನಗಳಿಂದ ಸ್ನಾನ ಮಾಡದೆ, ಬಟ್ಟೆ ಬದಲಾವಣೆಗೆ ಸ್ಥಳಾವಕಾಶವಿಲ್ಲದ ಕಾರಣ ಒಂದೇ ಬಟ್ಟೆಯಲ್ಲಿದ್ದಾರೆ. ತುರ್ತು ಸಂದರ್ಭ ನಗರಸಭೆಯ ಶೌಚಗೃಹವನ್ನು ಹಣ ನೀಡಿ ಬಳಕೆ ಮಾಡುತ್ತಿರುವುದಾಗಿ ಪುತ್ರ ಸುಬ್ರಹ್ಮಣ್ಯ ತಿಳಿಸಿದ್ದಾರೆ.

 ನೀತಿ ತಂಡದಿಂದ ದೂರು:

ಪುತ್ತೂರು ಆರ್ಯಾಪು ಗ್ರಾಮದಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ ಇಟ್ಟಿರುವ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಇದೇ ರೀತಿಯಲ್ಲಿ ಹಲವು ಒತ್ತುವರಿ ಹಾಗೂ ಕಟ್ಟಡ ನಿರ್ಮಾಣ ಪುತ್ತೂರು ಉಪ ವಿಭಾಗ ವ್ಯಾಪ್ತಿಯಲ್ಲಿ ನಡೆದಿದೆ. ಇದರಿಂದ ಭವಿಷ್ಯದಲ್ಲಿ ಸಾರ್ವಜನಿಕ ಯೋಜನೆಗಳಿಗೆ ಜಾಗದ ಕೊರತೆಯಾಗಲಿದ್ದು, ತಕ್ಷಣ ಒತ್ತುವರಿ ತೆರವಿಗೆ ಕ್ರಮಕೈಗೊಳ್ಳುವಂತೆ ಸರ್ವೇ ನಂಬರ್ ಸಹಿತವಾಗಿ ನೀತಿ ತಂಡದ ಜಯಂತ್ ಟಿ. ಜಿಲ್ಲಾಽಕಾರಿ, ಸಹಾಯಕ ಆಯುಕ್ತರು, ತಹಸೀಲ್ದಾರ್‌ಗೆ ದೂರು ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net