ಮನೆ ಕಳೆದುಕೊಂಡ ದಂಪತಿಯಿಂದ ಹೋರಾಟ ಮುಂದುವರಿಕೆ Puttur Protest

ಮನೆ ಕಳೆದುಕೊಂಡ ಕೌಕ್ರಾಡಿ ಕಾಪಿನಬಾಗಿಲು ನಿವಾಸಿ ರಾಧಾಮ್ಮ ಹಾಗೂ ಮುತ್ತು ಸ್ವಾಮಿ ದಂಪತಿ ನ್ಯಾಯಕ್ಕಾಗಿ ತಾಲೂಕು ಆಡಳಿತ ಸೌಧದ ಮುಂದೆ ಧರಣಿ ನಡೆಸುತ್ತಿರುವುದು. ಪುತ್ರ ಸುಬ್ರಹ್ಮಣ್ಯ ಹಾಜರಿದ್ದರು.
ಮನೆ ಕಳೆದುಕೊಂಡ ಕೌಕ್ರಾಡಿ ಕಾಪಿನಬಾಗಿಲು ನಿವಾಸಿ ರಾಧಾಮ್ಮ ಹಾಗೂ ಮುತ್ತು ಸ್ವಾಮಿ ದಂಪತಿ ನ್ಯಾಯಕ್ಕಾಗಿ ತಾಲೂಕು ಆಡಳಿತ ಸೌಧದ ಮುಂದೆ ಧರಣಿ ನಡೆಸುತ್ತಿರುವುದು. ಪುತ್ರ ಸುಬ್ರಹ್ಮಣ್ಯ ಹಾಜರಿದ್ದರು.
Published on
ಪುತ್ತೂರು: ಮನೆ ಕಳೆದುಕೊಂಡ ಕೌಕ್ರಾಡಿ ಕಾಪಿನಬಾಗಿಲು ನಿವಾಸಿ ರಾಧಾಮ್ಮ ಹಾಗೂ ಮುತ್ತು ಸ್ವಾಮಿ ದಂಪತಿ ನ್ಯಾಯಕ್ಕಾಗಿ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಮೂರು ದಿನ ಪೂರೈಸಿದ್ದು, ಸಹಾಯಕ ಆಯುಕ್ತರ ಮಾತು ಕೇಳುತ್ತಿಲ್ಲ ಎಂಬ ಕಾರಣಕ್ಕೆ ಪ್ರಕರಣ ದಾಖಲಿಸುವ ಪ್ರಯತ್ನ ನಡೆಯುತ್ತಿದೆ ಎನ್ನಲಾಗಿದೆ.
ಮಂಗಳವಾರ ಸಹಾಯಕ ಆಯುಕ್ತರ ಕಚೇರಿ ಸಿಬ್ಬಂದಿಯನ್ನು ಕಳುಹಿಸಿ ಮಾತುಕತೆ ಆಹ್ವಾನಿಸಿದ್ದಾರೆ. ಆದರೆ ನಾಲ್ಕು ಗೋಡೆಯ ಮಧ್ಯ ಮಾತುಕತೆ ಮಾಡುವ ಬದಲು ಸಾರ್ವಜನಿಕವಾಗಿ ಮಾತುಕತೆ ನಡೆಸುವ ಎಂದು ತಿಳಿಸಲಾಗಿದೆ. ರಾತ್ರಿ ನೀತಿ ತಂಡದ ಜಯಂತ್ ಟಿ. ಸಹಾಯಕ ಆಯುಕ್ತರನ್ನು ಭೇಟಿ ಮಾಡಿದಾಗ ೩೦ ದಿನಗಳ ಕಾಲಾವಕಾಶ ನೀಡುವಂತೆ ತಿಳಿಸಿದ್ದಾರೆ. ಈಗಾಗಲೇ ಒಂದು ವರ್ಷಕ್ಕೂ ಅಽಕ ಸಮಯವನ್ನು ನೀಡಲಾಗಿದ್ದು, ಇನ್ನು ಸಮಯ ನೀಡುವ ಪ್ರಶ್ನೆಯೇ ಇಲ್ಲ ಮತ್ತು ಪ್ರತಿಭಟನೆಯಿಂದ ಹಿಂದೆ ಸರಿಯುವ ಪ್ರಶ್ನೆಯಿಲ್ಲ ಎಂದು ತಿಳಿಸಿ ಹೊರಬಂದಿದ್ದಾರೆ.
ಬುಧವಾರ ಬೆಳಗ್ಗಿನಿಂದ ಪೊಲೀಸ್ ಇಲಾಖೆ ಪ್ರಕರಣ ದಾಖಲಿಸುವ ಬಗ್ಗೆ ಹೇಳುತ್ತಿದ್ದು, ಪ್ರತಿಭಟನೆಯಿಂದ ಯಾರಿಗೂ ತೊಂದರೆ ನೀಡಿಲ್ಲ. ಅದಾಗ್ಯೂ ಠಾಣೆಗೆ ಕರೆದುಕೊಂಡು ಹೋದರೆ ಅಲ್ಲೇ ಕೂರುತ್ತೇವೆ. ಅಲ್ಲಿಂದ ಬಿಟ್ಟ ತಕ್ಷಣ ಇದೇ ಸ್ಥಳಕ್ಕೆ ಆಗಮಿಸಿ ಕೂರುತ್ತೇವೆ. ಮತ್ತೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದರೆ, ಅಲ್ಲಿ ಕೂರುವುದಕ್ಕೂ ನಾವು ಸಿದ್ದರಿದ್ದೇವೆ ಎಂದು ನೀತಿ ತಂಡದ ಜಯಂತ್ ಟಿ. ಪ್ರತಿಕ್ರಿಯೆ ನೀಡಿದ್ದಾರೆ.

ಊಟ ತಿಂಡಿಗೆ ದಾನಿಗಳ ಸಹಕಾರ!

ಮಂಗಳವಾರ ಮಧ್ಯಾಹ್ನ ಮಾಜಿ ಶಾಸಕ ಸಂಜೀವ ಮಠಂದೂರುಭೇಟಿ ನೀಡಿ ಮಾತನಾಡಿಸಿದ್ದಲ್ಲದೆ, ಊಟಕ್ಕೆ ವ್ಯವಸ್ಥೆ ಮಾಡಿದ್ದರು. ರಾತ್ರಿ ಊಟಕ್ಕೆ ಸ್ಥಳೀಯ ಸಂಘಟನೆಯೊಂದು ವ್ಯವಸ್ಥೆ ಮಾಡಿದೆ. ಬುಧವಾರ ಬೆಳಗ್ಗೆ ಹೋಟೆಲ್ ಒಂದರ ಮಾಲೀಕರು ವ್ಯವಸ್ಥೆ ಕಲ್ಪಿಸಿದ್ದರು. ಚಾಲನಾ ತರಬೇತಿ ಕೇಂದ್ರವರು ಸೇರಿ ವಿವಿಧ ದಾನಿಗಳು ಊಟ ತಿಂಡಿಗೆ ವ್ಯವಸ್ಥೆಯನ್ನು ಕಲ್ಪಿಸುತ್ತಿದ್ದಾರೆ ಎಂದು ಸಂತ್ರಸ್ತರ ಪುತ್ರ ಸುಬ್ರಹ್ಮಣ್ಯ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net