ಸ್ಥಳೀಯರಿಂದಲೇ ಅಣೆಕಟ್ಟು ನಿರ್ವಹಣೆ : ಸ್ಪೋರ್ಟ್ಸ್ ಕ್ಲಬ್‌ನಿಂದ ಮಾದರಿ ಕಾರ್ಯ

ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ಸದಸ್ಯರು ಶ್ರಮದಾನದ ಮೂಲಕ ಜಲ ಸಂರಕ್ಷಣೆ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.
ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ಸದಸ್ಯರು ಶ್ರಮದಾನದ ಮೂಲಕ ಜಲ ಸಂರಕ್ಷಣೆ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.
Published on

ಬೇಸಿಗೆಯಲ್ಲಿಲ್ಲ ನೀರಿನ ಸಮಸ್ಯೆ

ತೋಕೂರಿನಲ್ಲಿ ಅಣೆಕಟ್ಟುಗಳನ್ನು ಸಂಘ ಸಂಸ್ಥೆಗಳೇ ನಿರ್ವಹಿಸುತ್ತಿರುವುದು ಮಾದರಿ ವಿಚಾರ. ಆದ್ದರಿಂದ ಪಂಚಾಯಿತಿಗೆ ಮತ್ತು ಇಲಾಖೆಗೆ ಆರ್ಥಿಕ ಹೊರೆ ತಪ್ಪಿ ಸಮಸ್ಯೆ ಉದ್ಭವಿಸಿಲ್ಲ.

ಗ್ರಾಮದ ಜೀವ ಜಲ ಪೂರೈಸುವ ಕಿಂಡಿ ಅಣೆಕಟ್ಟುಗಳ ಸೂಕ್ತ ನಿರ್ವಹಣೆಯ ಜವಾಬ್ದಾರಿ ಹೊತ್ತುಕೊಳ್ಳಲಾಗಿದೆ. ಸದಸ್ಯರು ಪರಸ್ಪರ ಕೈ ಜೋಡಿಸುತ್ತಾ ಈ ಕಾರ್ಯದಲ್ಲಿ ನಿರಂತರವಾಗಿ ಪಾಲ್ಗೊಳ್ಳುತ್ತಿರುವುದರಿಂದ ಸಾಧನೆ ಸಾಧ್ಯವಾಗಿದೆ.

ಗ್ರಾಮೀಣ ಯುವ ಸಂಘಟನೆ ಸಮಾಜಮುಖಿಯಾಗಿ ಚಿಂತನೆ ನಡೆಸಿದರೆ ಸಮಾಜದ ಅಭಿವೃದ್ಧಿ ಸಾಧ್ಯ ಎನ್ನುವುದನ್ನು ಕಿಂಡಿ ಆಣೆಕಟ್ಟು ನಿರ್ವಹಣೆ ತೋರಿಸಿ ಕೊಟ್ಟದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net