ಹೈನುಗಾರಿಕೆಗೆ ನೀಡಬೇಕು ಪ್ರೋತ್ಸಾಹ

ಮಿಶ್ರತಳಿ ಹೆಣ್ಣು ಕರುಗಳ ಪ್ರದರ್ಶನ ಮತ್ತು ಮಾಹಿತಿ
ಮಿಶ್ರತಳಿ ಹೆಣ್ಣುಕರುಗಳ ಪ್ರದರ್ಶನ ಮತ್ತು ಮಾಹಿತಿ ಕಾರ್ಯಗಾರವನ್ನು ಶಾಸಕ ರಾಜೇಶ್ ನಾಕ್ ಉದ್ಘಾಟಿಸಿದರು. ಡಾ.ಎಂ.ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಸವಿತಾ ಎನ್.ಶೆಟ್ಟಿ, ಜೋ.ಪ್ರದೀಪ್ ಡಿಸೋಜ ಮತ್ತಿತರರು ಇದ್ದರು.
ಮಿಶ್ರತಳಿ ಹೆಣ್ಣುಕರುಗಳ ಪ್ರದರ್ಶನ ಮತ್ತು ಮಾಹಿತಿ ಕಾರ್ಯಗಾರವನ್ನು ಶಾಸಕ ರಾಜೇಶ್ ನಾಕ್ ಉದ್ಘಾಟಿಸಿದರು. ಡಾ.ಎಂ.ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಸವಿತಾ ಎನ್.ಶೆಟ್ಟಿ, ಜೋ.ಪ್ರದೀಪ್ ಡಿಸೋಜ ಮತ್ತಿತರರು ಇದ್ದರು.
Published on: 

ಗುರುಪುರ: ಕೃಷಿಯಿಂದ ದೂರವಾಗುತ್ತಿರುವ ಈ ಕಾಲಘಟ್ಟದಲ್ಲಿ ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ಕೆಲಸಗಳಾಗಬೇಕಿದೆ. ಗ್ರಾಮೀಣ ಪ್ರದೇಶದ ಪ್ರತಿಯೊಂದು ಮನೆಯಲ್ಲಿ ಕನಿಷ್ಠ ಒಂದಾದರೂ ಹಸು ಸಾಕಬೇಕು. ಹೈನುಗಾರಿಕೆಯಿಂದ ಆದಾಯವಿದೆ, ನಷ್ಟವಿಲ್ಲ ಎಂದು ಶಾಸಕ ರಾಜೇಶ್ ನಾಕ್ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ದ.ಕ. ಜಿಲ್ಲೆ ಹಾಗೂ ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಸಹಭಾಗಿತ್ವದಲ್ಲಿ ಶನಿವಾರ ಪೊಳಲಿ ದೇವಸ್ಥಾನದ ವಠಾರದಲ್ಲಿ ಮಿಶ್ರತಳಿ ಹೆಣ್ಣು ಕರುಗಳ ಪ್ರದರ್ಶನ ಮತ್ತು ಮಾಹಿತಿ ಕಾರ್ಯಾಗಾರ, ಗೋಪೂಜೆ ಬಳಿಕ ಆಯೋಜಿಸಲಾದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿಟ್ಲದ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಅವಿನಾಶ್ ಭಟ್ ಸ್ವಾಗತಿಸಿದರು. ಕಳ್ಳಿಗೆಯ ಪಶು ಸಖಿ ಪ್ರಾರ್ಥನೆಗೈದರು. ದ.ಕ ಹಾಲು ಒಕ್ಕೂಟ ನಿರ್ದೇಶಕಿ ಸವಿತಾ ಎನ್.ಶೆಟ್ಟಿ, ದ.ಕ ಹಾಲು ಒಕ್ಕೂಟದ ನಿರ್ದೇಶಕ ನಂದರಾಮ ರೈ, ಶ್ರೀ ಕ್ಷೇತ್ರ ಪೊಳಲಿಯ ಆಡಳಿತ ಮೊಕ್ತೇಸರ ಡಾ.ಎಂ.ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಕರಿಯಂಗಳ ಗ್ರಾಪಂ ಆಡಳಿತಾಧಿಕಾರಿ ಪ್ರದೀಪ್ ಡಿಸೋಜ, ಶ್ರೀ ಕ್ಷೇತ್ರ ಪೊಳಲಿಯ ಕಾರ್ಯನಿರ್ವಹಣಾಧಿಕಾರಿ ಚಂದ್ರಮೋಹನ್, ಕರಿಯಂಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವೆಂಕಟೇಶ ನಾವಡ, ಪುಂಚಮೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ವಾಮನ ಪೂಜಾರಿ, ಅಮ್ಮುಂಜೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಎ. ಎಚ್.ರಂಗನಾಥ ಶೆಟ್ಟಿ, ಬೆಂಜನಪದವು ಪಶು ಚಿಕಿತ್ಸಾಲಯದ ಹಿರಿಯ ಪಶು ವೈದ್ಯಾಧಿಕಾರಿ ಡಾ.ಕಾರ್ತಿಕ್ ಪಿ. ಮತ್ತಿತರರು ಇದ್ದರು. ಮಂದಾರ ಕೆ. ನಿರೂಪಿಸಿದರು.

ಹೆಣ್ಣು ಕರುಗಳ ಪ್ರದರ್ಶನ

ದೇವಸ್ಥಾನದ ಚೆಂಡಿನ ಗದ್ದೆಯಲ್ಲಿ ಮಿಶ್ರತಳಿ ಹೆಣ್ಣು ಕರುಗಳ ಪ್ರದರ್ಶನದಲ್ಲಿ ಪೊಳಲಿ, ಕರಿಯಂಗಳ, ಅಮ್ಮುಂಜೆ, ಅಡ್ಡೂರು ಹಾಗೂ ಇತರೆಡೆಯಿಂದ 100ಕ್ಕೂ ಮಿಕ್ಕ ಕರುಗಳು ಪಾಲ್ಗೊಂಡಿದ್ದವು. ಪ್ರದರ್ಶನದಲ್ಲಿ ಭಾಗವಹಿಸಿದ ಕರುಗಳಲ್ಲಿ 3 ತಿಂಗಳು, 3-6 ತಿಂಗಳು, 6-12 ತಿಂಗಳ ಕರುಗಳನ್ನು ವಿಂಗಡಿಸಿ ಪ್ರತಿ ವಿಭಾಗದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ಹಾಗೂ ಪ್ರದರ್ಶನದಲ್ಲಿ ಭಾಗವಹಿಸಿದ ಎಲ್ಲ ಕರುಗಳಿಗೂ ಪ್ರೋತ್ಸಾಹಕರ ಬಹುಮಾನ ಹಾಗೂ ಆಹಾರ ಕಿಟ್ ವಿತರಿಸಲಾಯಿತು. ಬೆಳ್ತಂಗಡಿಯ ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ(ಆಡಳಿತ) ಡಾ.ರವಿಕುಮಾರ್ ಎಂ., ‘ವೈಜ್ಞಾನಿಕ ರೀತಿಯಲ್ಲಿ ಕರುಗಳ ಪೋಷಣೆ ಮತ್ತು ಹೈನುಗಾರಿಕೆಯಲ್ಲಿ ಹಸಿರು ಮೇವಿನ ಮಹತ್ವ’ ಕುರಿತು ಹಾಗೂ ಬಂಟ್ವಾಳ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜೋ.ಪ್ರದೀಪ್ ಡಿಸೋಜ ರೈತರಿಗೆ ತೋಟಗಾರಿಕೆ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net