41,329 ರೂ. ಎಗರಿಸಿದ ಸೈಬರ್ ಕಳ್ಳರು

ವಾಹನ ದಂಡ ಸೋಗಿನಲ್ಲಿ ಆನ್‌ಲೈನ್ ವಂಚನೆ
cyber theft
cyber theft
Published on: 

ಕಾಸರಗೋಡು: ವಾಹನದ ದಂಡ ಪಾವತಿ ಸೋಗಿನಲ್ಲಿ ಯುವತಿಯ ಬ್ಯಾಂಕ್ ಖಾತೆಯಿಂದ ಆನ್‌ಲೈನ್ ವಂಚಕರು 41,329 ರೂ. ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿ ಕುಂಬಳೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂಬಳೆ ನಾಯ್ಕಪು ನಾರಾಯಣಮಂಗಲ ಹೌಸ್‌ನ ಅಕ್ಷತಾ ಕೆ. ಎಂಬುವರ ಬ್ಯಾಂಕ್ ಖಾತೆಯಿಂದ ಹಣ ಎಗರಿಸಲಾಗಿದೆ. ಮೊಬೈಲ್ ಫೋನ್‌ಗೆ ವಾಹನದ ದಂಡ ಪಾವತಿಸಬೇಕೆಂಬ ಹೆಸರಲ್ಲಿ ಲಿಂಕ್ ಬಂದಿದ್ದು, ಫೋನ್‌ನೊಂದಿಗೆ ಲಿಂಕ್ ಮಾಡಲಾಗಿದ್ದ ಬ್ಯಾಂಕ್ ಖಾತೆಯಿಂದ ನ.5ರಿಂದ 7ರ ನಡುವಿನ ಅವಧಿಯಲ್ಲಿ ಸೈಬರ್ ವಂಚಕರು ಹಲವು ಕಂತುಗಳಲ್ಲಿ ಒಟ್ಟು 41,329 ರೂ. ಎಗರಿಸಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.