ಸೊಸೈಟಿ ಸಾಧನೆಗೆ ಸದಸ್ಯರೇ ಮುಖ್ಯ ಬುನಾದಿ : ಎಚ್.ವಸಂತ ಬೆರ್ನಾಡ್ ಬಣ್ಣನೆ

ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ಕಿನ್ನಿಗೋಳಿ ಶಾಖೆಯಲ್ಲಿ ಗ್ರಾಹಕರ ದಿನವನ್ನು ಸೊಸೈಟಿ ಅಧ್ಯಕ್ಷ ವಸಂತ್ ಬೆರ್ನಾಡ್ ಉದ್ಘಾಟಿಸಿದರು.
ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ಕಿನ್ನಿಗೋಳಿ ಶಾಖೆಯಲ್ಲಿ ಗ್ರಾಹಕರ ದಿನವನ್ನು ಸೊಸೈಟಿ ಅಧ್ಯಕ್ಷ ವಸಂತ್ ಬೆರ್ನಾಡ್ ಉದ್ಘಾಟಿಸಿದರು.
Published on

ಕಿನ್ನಿಗೋಳಿ: ಪ್ರಿಯದರ್ಶಿನಿ ಸೊಸೈಟಿಯನ್ನು ಆರಂಭದ ದಿನದಿಂದಲೂ ಪ್ರೋತ್ಸಾಹಿಸಿ ವ್ಯವಹಾರ ಮಾಡುತ್ತಿರುವ ಎಲ್ಲ ಗ್ರಾಹಕರು ಸೊಸೈಟಿಯ ಸಾಧನೆಗೆ ಮುಖ್ಯ ಬುನಾದಿ. ಗ್ರಾಹಕರ ಸಹಕಾರದಿಂದ ಮುಂದಿನ ದಿನಗಳಲ್ಲಿ ಗ್ರಾಹಕಪರ ಯೋಜನೆಗಳನ್ನು ರೂಪಿಸಲಾಗುವುದು ಎಂದು ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಎಚ್.ವಸಂತ ಬೆರ್ನಾಡ್ ಹೇಳಿದರು.

ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ಕಿನ್ನಿಗೋಳಿ ಶಾಖೆಯಲ್ಲಿ ಆಯೋಜಿಸಲಾದ ಗ್ರಾಹಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಿವೃತ್ತ ಉಪನ್ಯಾಸಕ ಪ್ರೇಮನಾಥ್ ಶೆಟ್ಟಿಗಾರ್, ಪಿಸಿಎ ಬ್ಯಾಂಕ್ ನಿವೃತ್ತ ಅಧಿಕಾರಿ ಶಕೀಲಾ ಶೆಟ್ಟಿ ಶುಭಹಾರೈಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಸ್ವಾಗತಿಸಿದರು. ಶಾಖಾ ಪ್ರಬಂಧಕ ಮೋಹನ್‌ದಾಸ್ ಪೂಜಾರಿ ವಂದಿಸಿದರು. ಪ್ರಧಾನ ಕಚೇರಿಯ ಸಾಲ ವಿಭಾಗದ ಪ್ರಬಂಧಕಿ ಅಕ್ಷತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿ ಕ್ಯಾರಲ್ ಡಿಸೋಜ, ದೀಪಕ್ ಸಾಲ್ಯಾನ್, ಪ್ರಕಾಶ್ ಚಂದ್ರ ಶೆಟ್ಟಿಗಾರ್ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net