ಫೆ.15ರಂದು ಮಹಾಶಿವರಾತ್ರಿ ನಡೆಯಲಿದ್ದು, ಬೆಂಗಳೂರು ಸಹಿತ ರಾಜ್ಯದ ನಾನಾ ಜಿಲ್ಲೆಗಳಿಂದ ಸಹಸ್ರ ಸಂಖ್ಯೆಯ ಭಕ್ತರು ಧರ್ಮಸ್ಥಳಕ್ಕೆ ಚಾರ್ಮಾಡಿ, ಕೊಕ್ಕಡ ಮೂಲಕ ಕಾಲ್ನಡಿಗೆಯಲ್ಲಿ ಆಗಮಿಸಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಪುನೀತರಾಗುತ್ತಾರೆ. ಈಗಾಗಲೇ ತಂಡಗಳು ಅರ್ಧ ಹಾದಿ ಕ್ರಮಿಸಿ ಮುಂದುವರಿದಿವೆ.
ಪಾದಯಾತ್ರೆ ಮೂಲಕ ಆಗಮಿಸುವ ತಂಡಗಳಿಗೆ ಮಹಾಶಿವರಾತ್ರಿ ಪಾದಯಾತ್ರೆ ಸಮಿತಿ ಮೂಲಕ ಸೂಚನೆಗಳನ್ನು ನೀಡುವ ಫಲಕಗಳನ್ನು ರಸ್ತೆ ಬದಿ ಅಲ್ಲಲ್ಲಿ ಹಾಕಲಾಗಿದೆ. ಘಾಟಿ ಪ್ರದೇಶದಲ್ಲಿ ಸಂಘ ಸಂಸ್ಥೆಗಳ ವತಿಯಿಂದ ಮುಂದಿನ ದಿನಗಳಲ್ಲಿ ಪಾನೀಯ ಇತ್ಯಾದಿ ಕೌಂಟರ್‌ಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಧರ್ಮಸ್ಥಳದಲ್ಲಿ ದೇವಸ್ಥಾನದ ಮಹಾದ್ವಾರ ಎದುರುಗಡೆ ಉಚಿತ ಪಾನೀಯ ವ್ಯವಸ್ಥೆ, ಸೂಚನೆ ನೀಡಲು ವಿಚಾರಣಾ ಕಚೇರಿ ಇತ್ಯಾದಿ ವ್ಯವಸ್ಥೆ ಇರಲಿದೆ.
ಸ್ಥಳೀಯರ ಸಹಕಾರ
ಸ್ವಚ್ಛತೆಗೆ ಆದ್ಯತೆ
ನಮ್ಮದು ಇದು 37ನೇ ವರ್ಷದ ಪಾದಯಾತ್ರೆ. ನಾವು ಬೆಂಗಳೂರಿನಿಂದ 100 ಮಂದಿ ಹೊರಟಿದ್ದು, ದಾರಿಯುದ್ದಕ್ಕೂ ನಮ್ಮ ತಂಡಕ್ಕೆ ಸದಸ್ಯರು ಸೇರುತ್ತಾರೆ. ಧರ್ಮಸ್ಥಳ ತಲುಪುವಾಗ ನಮ್ಮದು 500 ಜನರ ತಂಡವಾಗುತ್ತದೆ. ದಾರಿಯುದ್ದಕ್ಕೂ ಸ್ವಚ್ಛತೆ ಕಾಪಾಡುತ್ತಿದ್ದೇವೆ. ಈ ಬಗ್ಗೆ ಅಲ್ಲಲ್ಲಿ ಬ್ಯಾನರ್‌ಗಳನ್ನು ಹಾಕಲಾಗಿದೆ.