ರೈತರ ವಿಮೆ ಶೀಘ್ರ ಜಮೆ, ಮಳೆಮಾಪನ ದುರಸ್ತಿಗೆ ಶೀಘ್ರ ಕ್ರಮ Crop Insurance

ವಿಧಾನಸೌಧ ಕಚೇರಿಯಲ್ಲಿ ಹವಾಮಾನ ಆಧಾರಿತ ಬೆಳೆ ವಿಮಾ ಪರಿಹಾರ ಮೊತ್ತದಲ್ಲಿ ಲೋಪವಾಗಿರುವ ಬಗ್ಗೆ ತೋಟಗಾರಿಕಾ ಇಲಾಖೆ ಅಧಿಕಾರಿಗಳ ಜತೆಗೆ ಸಭೆ
ವಿಧಾನಸೌಧ ಕಚೇರಿಯಲ್ಲಿ ಹವಾಮಾನ ಆಧಾರಿತ ಬೆಳೆ ವಿಮಾ ಪರಿಹಾರ ಮೊತ್ತದಲ್ಲಿ ಲೋಪವಾಗಿರುವ ಬಗ್ಗೆ ತೋಟಗಾರಿಕಾ ಇಲಾಖೆ ಅಧಿಕಾರಿಗಳ ಜತೆಗೆ ಸಭೆ
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಅಶೋಕ್ ಕುಮಾರ್ ರೈ ಮಾಹಿತಿ
  • ತೋಟಗಾರಿಕಾ ಅಧಿಕಾರಿಗಳ ಸಭೆ

ಪುತ್ತೂರು: ಹವಾಮಾನಆಧಾರಿತ ಬೆಳೆ ವಿಮೆಯಲ್ಲಿ ಪುತ್ತೂರು ಭಾಗದ ನಾಲ್ಕು ಗ್ರಾಮಕ್ಕೆ ತಾಂತ್ರಿಕ ಕಾರಣದಿಂದ ಬಾಕಿ ಇದ್ದು, ಕೋಡಿಂಬಾಡಿ, ಕೊಡಿಪ್ಪಾಡಿ ಗ್ರಾಮದ ರೈತರಿಗೆ ಮೊತ್ತ ಬಿಡುಗಡೆಯಾಗಿದೆ. ಕೆಲವೇ ದಿನಗಳಲ್ಲಿ ಖಾತೆಗೆ ಜಮೆಯಾಗಲಿದೆ. ವಿಟ್ಲ ಮತ್ತು ಬಲ್ನಾಡು ಗ್ರಾಮದ ರೈತರ ವಿಮೆ ಶೀಘ್ರ ಜಮೆಯಾಗಲಿದೆ. ಕಡಿಮೆ ವಿಮೆ ಜಮೆಯಾಗಿರುವ ರೈತರ ಪಟ್ಟಿಯನ್ನು ಇಲಾಖೆಗೆ ಸಲ್ಲಿಸಿದ್ದು, ಅದನ್ನು ಇಲಾಖಾಮಟ್ಟದಲ್ಲಿ ಪರಿಶೀಲನೆ ನಡೆದು ಬಳಿಕ ಸೂಕ್ತನಿರ್ಧಾರವನ್ನು ಇಲಾಖೆ ಕೈಗೊಳ್ಳಲಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.

ವಿಧಾನಸೌಧಕಚೇರಿಯಲ್ಲಿ ಹವಾಮಾನ ಆಧಾರಿತ ಬೆಳೆ ವಿಮಾ ಪರಿಹಾರ ಮೊತ್ತದಲ್ಲಿ ಲೋಪವಾಗಿರುವ ಬಗ್ಗೆ ತೋಟಗಾರಿಕಾ ಇಲಾಖೆ ಅಧಿಕಾರಿಗಳ ಜತೆಗೆ ಸಭೆ ನಡೆಸಿದರು.

ಕೋಡಿಂಬಾಡಿ,ಕೊಡಿಪ್ಪಾಡಿ, ವಿಟ್ಲ ಹಾಗೂ ಬಲ್ನಾಡು ಗ್ರಾಮದ ರೈತರಿಗೆ ಕಾಳುಮೆಣಸು ವಿಮೆ ಮಾತ್ರ ಮಂಜೂರಾಗಿದೆ. ಅಡಕೆ ಬೆಳೆ ವಿಮೆ ಮಂಜೂರಾಗಿರಲಿಲ್ಲ. ಬಗ್ಗೆ ಅಽಕಾರಿಗಳಜತೆ ಚರ್ಚೆ ನಡೆಸಿದರು. ಜಿಲ್ಲೆಯಲ್ಲಿ ಸಾವಿರ ರೈತರುಬೆಳೆವಿಮಾ ಕಂತು ಪಾವತಿಗೆ ಬ್ಯಾಂಕ್ ಖಾತೆಯ ಕೆವೈಸಿ ಆಗದೆ ಸಮಸ್ಯೆಯಾಗಿದೆ. ಮಳೆ ಪ್ರಮಾಣದ ಬಗ್ಗೆಯೂ ಅಗತ್ಯ ದಾಖಲೆಗಳನ್ನು ತರಿಸಿಕೊಳ್ಳಲಾಗಿದೆ. ಮುಂದಿನ ವರ್ಷ ಇಂತಹ ಸಮಸ್ಯೆಯಾಗಬಾರದೆಂಬ ಕಾರಣಕ್ಕೆ ಮಳೆ ಮಾಪಕಗಳನ್ನು ತ್ವರಿತವಾಗಿ ಸರಿಪಡಿಸುವ ಕಾರ್ಯವಾಗಲಿದೆ ಎಂದರು.

ತೋಟಗಾರಿಕೆಇಲಾಖೆಯ ಜಂಟಿ ನಿರ್ದೇಶಕ ಶಕೀಲ್ ಅಹ್ಮದ್ ಇದ್ದರು.

ಇನ್ನುಬರುವುದು ಅನುಮಾನ!

ಮಳೆಮಾಪಕಗಳ ದಾಖಲೆಯನ್ನು ಬೇರೆ ಬೇರೆ ಕಡೆಯಿಂದ ಇಲಾಖೆ ಸಂಗ್ರಹಿಸಿದ್ದು, ನಿರಂತರ ನಾಲ್ಕು ದಿನ ಮಳೆಯಾದರೆ, ಅದನ್ನು ಅತಿಯಾದ ಮಳೆಯೆಂದು ಪರಿಗಣಿಸಲಿದೆ. ಸಣ್ಣ ಪುಟ್ಟ ವಿಚಾರಗಳನ್ನು ಟರ್ಮ್ ಶೀಟ್ನಲ್ಲಿ ಬದಲಿಸಿರೈತರನ್ನು ಕತ್ತಲೆಗೆ ತಳ್ಳುವ ಕಾರ್ಯವನ್ನು ಕಂಪನಿ ಹಾಗೂ ಅಽಕಾರಿಗಳು ಮಾಡಿದ್ದಾರೆ ಎನ್ನಲಾಗಿದೆ. ಈಗ ಬಂದಿರುವ ಹಣಕ್ಕಿಂತಅಽಕ ಹಣ ನೀಡಲು ಅಽಕಾರಿಗಳುನಿರಾಕರಿಸಿದ್ದಾರೆ ಎನ್ನಲಾಗಿದೆ.

ರೈತರಿಗೆಅನ್ಯಾಯ!

ಬಿಸಿಲುಹಾಗೂ ಮಳೆ ಕಾರಣದಿಂದ ಬೆಳೆಯನ್ನು ಕಳೆದುಕೊಂಡು ಸಮಸ್ಯೆ ಸುಳಿಯಲ್ಲಿ ಸಿಲುಕಿದ ರೈತರಿಗೆ ಬೆಳೆ ವಿಮೆ ಪ್ರಯೋಜನಕ್ಕೆ ಬಂದಿಲ್ಲ. ಕೆಲವು ಗ್ರಾಮಗಳಲ್ಲಿ ಕಟ್ಟಿದ ಹಣವೂ ರೈತರ ಕೈಸೇರಿಲ್ಲ. ಸರ್ಕಾರವೂ ರೈತರ ಕೈಹಿಡಿಯುವ ಕಾರ್ಯ ಮಾಡದೆ, ಅನ್ಯಾಯ ಎಸಗಿದೆ ಎಂಬ ಆರೋಪ ಕೇಳಿಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net