ಕಲ್ಮಂಜ, ಮುಂಡಾಜೆಯಲ್ಲಿ ಮೊಸಳೆ ಪತ್ತೆ

 ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಕಲ್ಮಂಜ ಮತ್ತು ಮುಂಡಾಜೆ ಗ್ರಾಮ ವ್ಯಾಪ್ತಿಯ ಹುಣಿಪಾಜೆ, ಕಜೆ, ಕುಡೆಂಚಿ, ಕಾಯರ್ತೋಡಿ ಮೊದಲಾದ ಭಾಗಗಳಲ್ಲಿ ಹರಿಯುವ ನೇತ್ರಾವತಿ ನದಿ ಬದಿಯಲ್ಲಿ ಮೊಸಳೆ ಇರುವುದನ್ನು ನದಿ ಬದಿ ನಿವಾಸಿಗಳು ಕಂಡಿದ್ದಾರೆ. ಭಾನುವಾರ ಮಧ್ಯಾಹ್ನದ ಹೊತ್ತಿಗೆ ತಮ್ಮ ತೋಟದ ಪಕ್ಕದಲ್ಲೇ ಇರುವ ನದಿಯಲ್ಲಿ ಮೊಸಳೆ ಇರುವುದು ಸಂತೋಷ್ ಹೆಬ್ಬಾರ್ ಕಂಡಿದ್ದಾರೆ.
ಮರಳಿನ ಮೇಲೆ ಗೋಚರಿಸುವ ಮೊಸಳೆ ಜನರನ್ನು ಕಂಡ ಕೂಡಲೇ ನದಿಗೆ ಇಳಿದಿದೆ. ಸುಮಾರು 3 ಕಿ.ಮೀ. ವ್ಯಾಪ್ತಿಯ ಅಲ್ಲಲ್ಲಿ ಕಂಡುಬರುತ್ತಿದೆ. ಈ ಪರಿಸರಗಳಲ್ಲಿ ನದಿ ಸಮೀಪ ಹತ್ತಾರು ಮನೆ, ಕೃಷಿ ತೋಟಗಳಿದ್ದು, ಇಲ್ಲಿನ ಜನರಲ್ಲಿ ಆತಂಕ ಉಂಟಾಗಿದೆ.

ಪಜಿರಡ್ಕದಲ್ಲಿಯೂ ಪ್ರತ್ಯಕ್ಷ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net