ಸುಳ್ಳು ದಾಖಲೆ ಸೃಷ್ಟಿಸಿ ಪ್ರಸಾರ : ಪ್ರಕರಣ ದಾಖಲು : ಆರೋಪಿಗಳ ರಕ್ಷಿಸಲು ಸಂಚು

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಪುತ್ತೂರು ಗ್ರಾಮಾಂತರ: ಜಾನುವಾರು ಅಕ್ರಮ ಸಾಗಾಟ ಆರೋಪಿಯನ್ನು ರಕ್ಷಿಸಲು ಸುಳ್ಳು ದಾಖಲೆ ಸೃಷ್ಟಿಸಿ ಪ್ರಸಾರ ಮಾಡಿದ ಸಾಮಾಜಿಕ ಜಾಲತಾಣ ಬಳಕೆದಾರರ ವಿರುದ್ಧ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆಟ್ಟಣಿಗೆ ಮುಡ್ನೂರು ಗ್ರಾಮದ ಬೆಳ್ಳಿಚಡವು ಎಂಬಲ್ಲಿ ಅ.22ರಂದು ಬೆಳಗ್ಗೆ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿಯನ್ನು ಸಂಪ್ಯ ಠಾಣೆ ಪೊಲೀಸರು ನಿಲ್ಲಿಸಲು ಸೂಚಿಸಿದ್ದರು. ಈ ವೇಳೆ ಲಾರಿ ಚಾಲಕ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದು, ಪೊಲೀಸರು ಚಾಲಕನ ಕಾಲಿಗೆ ಗುಂಡು ಹಾರಿಸಿ ಆತನನ್ನು ಬಂಧಿಸಿದ್ದರು. ಬಳಿಕ ವಾಹನದಲ್ಲಿ ಸಾಗಿಸುತ್ತಿದ್ದ ಜಾನುವಾರುಗಳನ್ನು ಚನ್ನರಾಯಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಖರೀದಿಸಲಾಗಿದೆ ಎಂಬ ಬಗ್ಗೆ ರಸೀದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಬಗ್ಗೆ ಪೊಲೀಸರು ಮಾರುಕಟ್ಟೆ ಸಮಿತಿ ಕಾರ್ಯದರ್ಶಿಯಲ್ಲಿ ವಿಚಾರಿಸಿದಾಗ ರಸೀದಿ ನಕಲಿ ಎಂದು ದೃಢಪಟ್ಟಿದೆ.
ಸುಳ್ಳು ದಾಖಲೆ ಎಂದು ತಿಳಿದಿದ್ದರೂ, ಆರೋಪಿಗಳನ್ನು ರಕ್ಷಿಸುವ ಉದ್ದೇಶದಿಂದ ರಶೀದಿ ಸಹಿತ ಸುದ್ದಿ ಪ್ರಸಾರ ಮಾಡಿದ ‘ಸ್ಟೇಟ್ ಆಫೀಸ್ ಎಸ್‌ಡಿಪಿಐ ಕರ್ನಾಟಕ’ ಹೆಸರಿನ ಎಕ್ಸ್ ಖಾತೆದಾರರು, ‘ತೇಜಸ್ ನ್ಯೂಸ್ ಡಾಟ್ ಕಾಂ’ ಮಾಲೀಕ ಮತ್ತು ಸಂಪಾದಕ ಸದಾತ್ ಬಜತ್ತೂರು ಮತ್ತು ಇತರ ಸಾಮಾಜಿಕ ಜಾಲತಾಣ ಬಳಕೆದಾರರ ವಿರುದ್ಧ ಪ್ರಕರಣ ದಾಖಲಾಗಿದೆ.

ಪೊಲೀಸರಿಂದ ಎಚ್ಚರಿಕೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net