ಬಳಂಜದಲ್ಲಿ ಗುರುಮಂದಿರ ನಿರ್ಮಾಣಕ್ಕೆ ಸಹಕಾರ

ಶಾಸಕ ಹರೀಶ್ ಪೂಂಜ ನೂತನ ಅಕ್ಷಯ ಪಾಕಶಾಲೆಯನ್ನು ಉದ್ಘಾಟಿಸಿದರು. ಪ್ರಮುಖರಾದ ಸಂತೋಷ್ ಪಿ.ಕೋಟ್ಯಾನ್, ಸಂಜೀವ ಪೂಜಾರಿ, ಡಾ.ಸದಾನಂದ ಪೂಜಾರಿ, ಎಚ್.ಧರ್ಣಪ್ಪ ಪೂಜಾರಿ ಮತ್ತಿತರರಿದ್ದರು.
ಶಾಸಕ ಹರೀಶ್ ಪೂಂಜ ನೂತನ ಅಕ್ಷಯ ಪಾಕಶಾಲೆಯನ್ನು ಉದ್ಘಾಟಿಸಿದರು. ಪ್ರಮುಖರಾದ ಸಂತೋಷ್ ಪಿ.ಕೋಟ್ಯಾನ್, ಸಂಜೀವ ಪೂಜಾರಿ, ಡಾ.ಸದಾನಂದ ಪೂಜಾರಿ, ಎಚ್.ಧರ್ಣಪ್ಪ ಪೂಜಾರಿ ಮತ್ತಿತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ಎಂಬ ಸಂದೇಶವನ್ನು ಜಗತ್ತಿಗೆ ಸಾರಿದ ಮಹಾನ್ ಸಂತ ಬ್ರಹ್ಮಶ್ರೀ ನಾರಾಯಣಗುರುಗಳು ಕೇವಲ ಒಂದು ಸಮಾಜಕ್ಕೆ ಸೇರಿದವರಲ್ಲ, ಅವರು ವಿಶ್ವಕ್ಕೆ ಗುರುಗಳು. ಬಳಂಜದ ಈ ಸಂಘಟನೆ ವಿನೂತನ ಕಾರ್ಯಕ್ರಮಗಳ ಮೂಲಕ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು ಸಮಾಜಕ್ಕೆ ಮಾದರಿಯಾಗಿದೆ ಶಾಸಕ ಹರೀಶ್ ಪೂಂಜ ಹೇಳಿದರು.
ಬಳಂಜ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿಯ ನೂತನ ಅಕ್ಷಯ ಪಾಕಶಾಲೆಯ ಉದ್ಘಾಟಿಸಿ ಮಾತನಾಡಿದರು. ಹಿರಿಯರು ಹಾಕಿಕೊಟ್ಟ ಪರಂಪರೆಯನ್ನು ಬಳಂಜದ ಬಿಲ್ಲವ ಸಂಘ ಪಾಲಿಸುತ್ತಿದ್ದು, ಎಲ್ಲರಿಗೂ ಮಾದರಿಯಾಗಿದೆ. ಇಲ್ಲಿಗೆ ಗುರುಮಂದಿರದ ಅಗತ್ಯವಿದ್ದು, ಮುಂದಿನ ದಿನಗಳಲ್ಲಿ ಇದು ಕಾರ್ಯಾಗತ ಆಗಲಿ. ಶಾಸಕನಾಗಿ ಪೂರ್ಣಪ್ರಮಾಣದ ಸಹಕಾರ ನೀಡುತ್ತೇನೆಂದು ಹೇಳಿದರು.
ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ.ಕೋಟ್ಯಾನ್ ಅಧ್ಯಕ್ಷತೆ ವಹಿಸಿ, ಸಂಘ ನಾಲ್ಕೂವರೆ ದಶಕಗಳಿಂದ ಸಮಾಜಮುಖಿ ಕೆಲಸಗಳೊಂದಿಗೆ ಸಮಾಜದಲ್ಲಿ ಗುರುತಿಸಿಕೊಂಡಿದೆ. ಸರ್ಕಾರ, ಜನಪ್ರತಿಧಿಗಳು ಹಾಗೂ ದಾನಿಗಳ ಸಹಕಾರದಿಂದ ಸಂಘ ಅಭಿವೃದ್ಧಿ ಪಥದಲ್ಲಿ ಸಾಗಿದೆ. ಮುಂದೆಯೂ ಹಲವಾರು ಕಾಮಗಾರಿ ನಡೆಯಲಿದ್ದು, ಎಲ್ಲರ ಸಹಕಾರ ಬೇಕಿದೆ ಎಂದರು.
ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಅಧ್ಯಕ್ಷ ಸಂಜೀವ ಪೂಜಾರಿ, ಭಾರತೀಯ ವೈದ್ಯಕೀಯ ಸಂಘದ ದ.ಕ.ಅಧ್ಯಕ್ಷ ಡಾ.ಸದಾನಂದ ಪೂಜಾರಿ ಮಾತನಾಡಿದರು.
ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಆತ್ಮಶಕ್ತಿ ವಿವಿಧೊದ್ದೇಶ ಸಹಕಾರಿ ಸಂಘ ಅಧ್ಯಕ್ಷ ಚಿತ್ತರಂಜನ್ ಬೋಳಾರ್, ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು, ಗುಜರಾತ್ ಉದ್ಯಮಿ ಶೇಖರ್ ದೇವಾಡಿಗ ಪಾಲಬೆ, ಕಿರುತೆರೆ ಮತ್ತು ಹಿರಿತೆರೆ ನಿರ್ದೇಶಕ ಸುಭಾಶ್ ಸುವರ್ಣ ಮಾತನಾಡಿದರು.
ಕರಳು ಬೇನೆ ಸಮಸ್ಯೆಯಿಂದ ಬಳಲುತ್ತಿರುವ ವರದರಾಜ್ ಪೂಜಾರಿ ಚಿಕಿತ್ಸೆಗೆ ಸಂಘದಿಂದ ಒಟ್ಟುಗೂಡಿಸಿದ 70 ಸಾವಿರ ರೂ. ನೆರವು ನೀಡಲಾಯಿತು.
ಸಮಿತಿ ಗೌರವಾಧ್ಯಕ್ಷ ಎಚ್.ಧರ್ಣಪ್ಪ ಪೂಜಾರಿ, ಗೌರವ ಮಾರ್ಗದರ್ಶಕ ಕೆ.ವಸಂತ ಸಾಲಿಯಾನ್, ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಶರತ್ ಅಂಚನ್, ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ಭಾರತಿ ಸಂತೋಷ್, ಸಂಘದ ನಿರ್ದೇಶಕ ಕೃಷ್ಣಪ್ಪ ಪೂಜಾರಿ, ಸಂತೋಷ್ ಕುಮಾರ್, ದಿನೇಶ್ ನಿಟ್ಟಡ್ಕ, ಯತೀಶ್ ವೈ.ಎಲ್., ದಿನೇಶ್ ಪೂಜಾರಿ ಅಂತರ, ಜಗದೀಶ್ ಪೂಜಾರಿ ಬಳ್ಳಿದಡ್ಡ, ವಿಜಯ ಪೂಜಾರಿ ಯೈಕುರಿ, ಮನೋಹರ್ ಬಳಂಜ, ರತ್ನಾಕರ ಪೂಜಾರಿ, ಸಂತೋಷ್ ಕುಮಾರ್, ಯೋಗೀಶ್ ಪೂಜಾರಿ, ದೀಪಕ್ ಎಚ್.ಡಿ., ಪ್ರವೀಣ್ ಡಿ.ಕೋಟ್ಯಾನ್, ಪ್ರದೀಪ್ ಕಾಪಿನಡ್ಕ, ಸಂತೋಷ್ ಪೂಜಾರಿ ಇತರರಿದ್ದರು.
ಪೂರ್ವಾಧ್ಯಕ್ಷ ರಂಜಿತ್ ಎಚ್.ಡಿ. ಸನ್ಮಾನಿತರ ಪರಿಚಯ ಪತ್ರ ವಾಚಿಸಿದರು. ಸಮಿತಿ ಕೋಶಾಧಿಕಾರಿ ಪ್ರವೀಣ್ ಕುಮಾರ್ ಎಚ್.ಎಸ್.ವಂದಿಸಿದರು. ಸಂತೋಷ್ ಪಿ. ಕೋಟ್ಯಾನ್ ಸ್ವಾಗತಿಸಿದರು. ವಿಶಾಲಾ ಜಗದೀಶ್ ನಿರೂಪಿಸಿದರು.

ಸನ್ಮಾನ, ಗೌರವಾರ್ಪಣೆ

ಅಕ್ಷಯ ಪಾಕಶಾಲೆಗೆ 26 ಲಕ್ಷ ರೂ. ಅನುದಾನ ಒದಗಿಸಿದ ಶಾಸಕ ಹರೀಶ್ ಪೂಂಜ, ಭಾರತೀಯ ವೈದ್ಯಕೀಯ ಸಂಘದ ದ.ಕ. ಅಧ್ಯಕ್ಷ ಡಾ.ಸದಾನಂದ ಪೂಜಾರಿ, ಜಿಲ್ಲಾ ರಾಜ್ಯೋತ್ಸವ ಸನ್ಮಾನಿತ ಬೆಳ್ತಂಗಡಿ ಶ್ರೀ ಗು.ನಾ.ಸ್ವಾ.ಸೇ.ಸಂ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು, ಪಾಕಶಾಲೆಯ ಗುತ್ತಿಗೆದಾರ ಪ್ರತೀಶ್ ಪೆರಿಂಜೆ, ಬಳಂಜ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ.ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು.

ಬ್ರಹ್ಮಶ್ರೀ ನಾರಾಯಣ ಗುರುಗಳು ಶಿಕ್ಷಣ ಮತ್ತು ಸಂಘಟನೆಗೆ ವಿಶೇಷ ಮಹತ್ವ ನೀಡಿದ್ದಾರೆ. ಹಾಗಾಗಿ ಶಿಕ್ಷಣದಿಂದ ಮಾತ್ರ ಸಮಾಜದ ಉನ್ನತೀಕರಣ ಸಾಧ್ಯವಿದೆ. ಬಳಂಜ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ ಹಲವು ವಿನೂತನ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net