ತಂಗುದಾಣ ನಿರ್ಮಾಣ ಶ್ಲಾಘನೀಯ

ಬಸ್ ನಿಲ್ದಾಣ ಉದ್ಘಾಟನೆ
ಮೂಡುಪೆರಾರದ ಕಾಯರಣೆಯಲ್ಲಿ ಬಸ್ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಲಾಯಿತು. ಶ್ರೀ ಕ್ಷೇತ್ರ ಪೆರಾರದ ಬಲವಾಂಡಿ ಮುಕ್ಕಾಲ್ದಿ ಬಾಲಕೃಷ್ಣ ಶೆಟ್ಟಿ ಅಳಿಕೆ, ರಂಗನಾಥ ಭಂಡಾರಿ ಮುಂಡಬೆಟ್ಟು ಗುತ್ತು, ಶಾಸಕರಾದ ಡಾ.ವೈ ಭರತ್ ಶೆಟ್ಟಿ ಇದ್ದರು.
ಮೂಡುಪೆರಾರದ ಕಾಯರಣೆಯಲ್ಲಿ ಬಸ್ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಲಾಯಿತು. ಶ್ರೀ ಕ್ಷೇತ್ರ ಪೆರಾರದ ಬಲವಾಂಡಿ ಮುಕ್ಕಾಲ್ದಿ ಬಾಲಕೃಷ್ಣ ಶೆಟ್ಟಿ ಅಳಿಕೆ, ರಂಗನಾಥ ಭಂಡಾರಿ ಮುಂಡಬೆಟ್ಟು ಗುತ್ತು, ಶಾಸಕರಾದ ಡಾ.ವೈ ಭರತ್ ಶೆಟ್ಟಿ ಇದ್ದರು.
Published on: 

ಗುರುಪುರ: ಮೂಡುಪೆರಾರದ ಕಾಯರಣೆಯಲ್ಲಿ ಬಹಳ ಅಗತ್ಯವಾಗಿ ಬೇಕಾಗಿದ್ದ ಬಸ್ ತಂಗುದಾಣವನ್ನು ನವರಂಗ್ ಫ್ರೆಂಡ್ಸ್ ಕಾಯರಣೆ ಸದಸ್ಯರು ನಿರ್ಮಿಸಿಕೊಟ್ಟಿರುವುದು ಶ್ಲಾಘನೀಯ ಕೆಲಸ. ಈ ಬಸ್ ನಿಲ್ದಾಣದಲ್ಲಿ ಸ್ವಚ್ಛತೆಯನ್ನು ಕಾಯ್ದುಕೊಂಡು ಇದನ್ನು ಸೂಪರ್ ಬಸ್‌ಸ್ಟಾೃಂಡ್ ಆಗಿಸುವ ಕೆಲಸವನ್ನು ಯುವಕರು ಮುಂದುವರಿಸಿಕೊಂಡು ಹೋಗಬೇಕು ಎಂದು ಶ್ರೀ ಕ್ಷೇತ್ರ ಪೆರಾರದ ಬಲವಾಂಡಿ ಮುಕ್ಕಾಲ್ದಿ ಬಾಲಕೃಷ್ಣ ಶೆಟ್ಟಿ ಅಳಿಕೆ ಹೇಳಿದರು.

ಮೂಡುಪೆರಾರದ ಕಾಯರಣೆಯಲ್ಲಿ ನವರಂಗ್ ಫ್ರೆಂಡ್ಸ್ ವತಿಯಿಂದ ದಿ.ಪ್ರದೀಪ್ ಪೂಜಾರಿ ಸ್ಮರಣಾರ್ಥ ನಿರ್ಮಿಸಿದ ನೂತನ ಬಸ್ ನಿಲ್ದಾಣವನ್ನು ಭಾನುವಾರ ಲೋಕಾರ್ಪಣೆಗೊಳಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿರಿಯರಾದ ರಂಗನಾಥ ಭಂಡಾರಿ ಮುಂಡಬೆಟ್ಟು ಗುತ್ತು ಮಾತನಾಡಿದರು. ಪ್ರದೀಪ್ ಪೂಜಾರಿಯವರ ತಾಯಿ ಸರಸ್ವತಿ ಅವರಿಗೆ ಆರ್ಥಿಕ ನೆರವು ನೀಡಿ ಗೌರವಿಸಲಾಯಿತು.

ಶಾಸಕ ಡಾ.ವೈ ಭರತ್ ಶೆಟ್ಟಿ ಶುಭ ಹಾರೈಸಿದರು. ನವರಂಗ್ ಫ್ರೆಂಡ್ಸ್ ಅಧ್ಯಕ್ಷ ಯೋಗೀಶ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ಶ್ರೀನಿವಾಸ ಶೆಟ್ಟಿ ನಾರ್ಯ, ಉದ್ಯಮಿ ಪ್ರತಾಪ್ ಭಂಡಾರಿ, ನಿವೃತ್ತ ಯೋಧ ಶಶಿಕಿರಣ್ ಶೆಟ್ಟಿ ಕಾಯರಣೆ, ಪಡುಪೆರಾರ ಪಂಚಾಯಿತಿ ನಿಕಟಪೂರ್ವ ಅಧಕ್ಷೆ ಮೀನಾಕ್ಷಿ ಗೌಡ, ಪೆರಾರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಅಮಿತಾ ಮೋಹನ್ ಶೆಟ್ಟಿ ಪಡೀಲ್, ಪಂಚಾಯಿತಿ ಸದಸ್ಯ ಯಶವಂತ ಪೂಜಾರಿ, ಜಿಪಂ ಮಾಜಿ ಸದಸ್ಯ ಕೃಷ್ಣ ಅಮೀನ್ ಗಂಜಿಮಠ, ಬಜರಂಗದಳ ಗುರುಪುರ ಪ್ರಖಂಡ ಸಂಚಾಲಕ ಜನಾರ್ದನ ಒಡ್ಡೂರು, ಪ್ರಮುಖರಾದ ಪುರುಷೋತ್ತಮ ಪೂಜಾರಿ ಆದಿಮಾಯೆ, ಪದ್ಮನಾಭ ಪೂಜಾರಿ ನೀರಳಿಕೆ, ದೇವಪ್ಪ ಶೆಟ್ಟಿ ಕೊಕ್ಕಾರು ಹಾಗೂ ಜವನೆರ್ ಪೆರಾರ ಸದಸ್ಯರು, ನೀರಳಿಕೆ ಬಾಂಧವರು ಮತ್ತು ಆದಿಮಾಯೆ ಫ್ರೆಂಡ್ಸ್ ಸದಸ್ಯರು ಇದ್ದರು.

ಮಧುರಾಜ್ ಗುರುಪುರ ನಿರೂಪಿಸಿ, ಹರ್ಷ ಕುಮಾರ್ ಈಶ್ವರಕಟ್ಟೆ ಸ್ವಾಗತಿಸಿದರು. ನವರಂಗ್ ಫ್ರೆಂಡ್ಸ್ ಕಾರ್ಯದರ್ಶಿ ಸುಜಿತ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net