ಕಾನ್‌ಸ್ಟೇಬಲ್ ಪರೀಕ್ಷೆಯ ಉತ್ತರ ಪತ್ರಿಕೆ ಬಿಡುಗಡೆ

ಪೊಲೀಸ್
ಪೊಲೀಸ್
Published on

ಪ್ರಮುಖ ಮುಖ್ಯಾಂಶಗಳು

  • ಸಂಭಾವ್ಯ ಅಂಕಗಳನ್ನು ಅಂದಾಜಿಸಲು ನೆರವು
  • ಮಂಗಳೂರು ಐಎಎಸ್‌ನ ವಿಷಯ ತಜ್ಞರು ಈ ಉತ್ತರ ಪತ್ರಿಕೆ ಸಿದ್ಧಪಡಿಸಿದ್ದಾರೆ
ಮಂಗಳೂರು: ನಾಗರಿಕ ಸೇವೆಗಳು ಮತ್ತು ಸರ್ಕಾರಿ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಮುಖ ತರಬೇತಿ ಸಂಸ್ಥೆಯಾದ "ಮಂಗಳೂರು ಐಎಎಸ್", ಆಗಸ್ಟ್ 2ರಂದು ನಡೆದ ಕರ್ನಾಟಕ ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ಲಿಖಿತ ಪರೀಕ್ಷೆಯ ಉತ್ತರ ಪತ್ರಿಕೆಯನ್ನು ಬಿಡುಗಡೆ ಮಾಡಿದೆ.
ಈ ರೀತಿ ಉತ್ತರ ಪತ್ರಿಕೆಯನ್ನು ಪರೀಕ್ಷೆ ಮುಗಿದ ತಕ್ಷಣವೇ ಬಿಡುಗಡೆ ಮಾಡಿದ ಮಂಗಳೂರಿನ ಮೊದಲ ಸಂಸ್ಥೆ "ಮಂಗಳೂರು ಐಎಎಸ್" ಆಗಿದೆ.
ಅಭ್ಯರ್ಥಿಗಳು ತಮ್ಮ ಸಾಧನೆಯನ್ನು ಮೌಲ್ಯಮಾಪನ ಮಾಡಲು ಮತ್ತು ಸಂಭಾವ್ಯ ಅಂಕಗಳನ್ನು ಅಂದಾಜಿಸಲು ನೆರವಾಗುವಂತೆ ಮಂಗಳೂರು ಐಜಿಎಸ್‌ನ ವಿಷಯ ತಜ್ಞರು ಈ ಉತ್ತರ ಪತ್ರಿಕೆಯನ್ನು ಸಿದ್ಧಪಡಿಸಿದ್ದಾರೆ.
ಪರೀಕ್ಷೆಗೆ ಹಾಜರಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಅಭ್ಯರ್ಥಿಗಳು ಮಂಗಳೂರು ಐಎಎಸ್ ಕ್ಯಾಂಪಸ್‌ಗೆ ಭೇಟಿ ನೀಡಿ ಉಚಿತವಾಗಿ ತಮ್ಮ ಉತ್ತರಗಳನ್ನು ಪರಿಶೀಲಿಸಿಕೊಳ್ಳಬಹುದು. ಸಂಸ್ಥೆಯ ಶಿಕ್ಷಕ ವೃಂದದವರು ಅಭ್ಯರ್ಥಿಗಳ ಸಂಶಯಗಳನ್ನು ನಿವಾರಿಸಲು ಮತ್ತು ಪ್ರಶ್ನೆ ಮತ್ತು ಉತ್ತರ ಪತ್ರಿಕೆಯ ಕುರಿತು ಚರ್ಚಿಸಲು ಲಭ್ಯವಿರುತ್ತಾರೆ ಎಂದು ಮಂಗಳೂರು ಐಎಎಸ್ ಸಂಸ್ಥಾಪಕ ಸಂತೋಷ್ ಕುಮಾರ್ ಎಸ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net