_1767714282581.webp?w=480&auto=format%2Ccompress&fit=max)
_1767714282581.webp?w=480&auto=format%2Ccompress&fit=max)
ಕಿನ್ನಿಗೋಳಿ: ಕಾಂಗ್ರೆಸ್ ಸರ್ಕಾರದ ಭ್ರಷ್ಟ ಆಡಳಿತಕ್ಕೆ ಕಿನ್ನಿಗೋಳಿ ಬಜಪೆ ಜನ ಸರಿಯಾದ ಉತ್ತರ ಕೊಟ್ಟಿದ್ದಾರೆ. ಕ್ರೈಸ್ತ ಸಮುದಾಯದವರು ಇರುವ ಕಡೆ ಯುವಕನೋರ್ವ ಜಯಗಳಿಸಿದ್ದಾನೆ ಎಂದರೆ ಬಿಜೆಪಿ ಮೇಲೆ ಎಲ್ಲ ಸಮುದಾಯದವರೂ ವಿಶ್ವಾಸ ಇಟ್ಟಿದ್ದಾರೆ, ಸರ್ಕಾರ ಬಂದು ಎರಡು ವರ್ಷ ಕಳೆದರೂ ಅಭಿವೃದ್ಧಿ ಶೂನ್ಯ ಎಂದು ಸಂಸದ ಬ್ರಿಜೇಶ್ ಚೌಟ ಹೇಳಿದರು.
ಭಾರತೀಯ ಜನತಾ ಪಾರ್ಟಿ ಮೂಲ್ಕಿ-ಮೂಡುಬಿದಿರೆ ಮಂಡಲ ಬಜಪೆ ಹಾಗೂ ಕಿನ್ನಿಗೋಳಿ ಪಪಂ ಚುನಾಯಿತ ಅಭ್ಯರ್ಥಿಗಳ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಶಾಸಕ ಉಮಾನಾಥ ಕೋಟ್ಯಾನ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮಂಡಲಾಧ್ಯಕ್ಷ ದಿನೇಶ್ ಪುತ್ರನ್, ಕಾರ್ಯದರ್ಶಿ ಹರಿಪ್ರಸಾದ್, ರಂಜಿತ್ ಪೂಜಾರಿ ತೋಡಾರ್, ಜಿಲ್ಲಾ ಉಪಾಧ್ಯಕ್ಷ ಶಾಂತಿಪ್ರಸಾದ್ ಹೆಗ್ಡೆ, ಸುನೀಲ್ ಅಳ್ವ, ಕಿನ್ನಿಗೋಳಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಅಭಿಲಾಷ್ ಶೆಟ್ಟಿ ಕಟೀಲ್, ಬಜಪೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಿಜಯ್ ಕೆಂಜಾರ್, ಬಿಜೆಪಿ ಮುಖಂಡ ಈಶ್ವರ್ ಕಟೀಲ್, ಜಿಲ್ಲಾ ಯುವ ಮೋರ್ಚದ ಕಾರ್ಯದರ್ಶಿ ಭರತ್ ರಾಜ್ ಕೃಷ್ಣಾಪುರ ಮತ್ತಿತರರು ಉಪಸ್ಥಿತರಿದ್ದರು.
ಗೋಪಾಲ ಶೆಟ್ಟಿಗಾರ್ ಮತ್ತು ವಿನೋದ್ ಬೊಳ್ಳಾಯರು ನಿರೂಪಿಸಿದರು. ದಿನೇಶ್ ಪುತ್ರನ್ ವಂದಿಸಿದರು. ಕಿನ್ನಿಗೋಳಿ ಪಪಂ ವಿಜೇತ ಅಭ್ಯರ್ಥಿಗಳ ಮೆರವಣಿಗೆ ಪುನರೂರಿನಿಂದ ಕಟೀಲುವರೆಗೆ ನಡೆದರೆ, ಬಜಪೆ ಪಪಂ ವಿಜೇತ ಅಭ್ಯರ್ಥಿಗಳ ಮೆರವಣಿಗೆ ಮರವೂರಿನಿಂದ ಸ್ವಾಮಿಲಪದವುವರೆಗೆ ನಡೆಯಿತು.