ನಮೋ ಬ್ರಿಗೇಡ್‌ನಿಂದ ತನಿಖಾಧಿಕಾರಿಗಳಿಗೆ ಅಭಿನಂದನೆ

ಮಾನ್ಯದಲ್ಲಿ ಪೊಲೀಸ್ ಅಧಿಕಾರಿಗಳನ್ನು ಅಭಿನಂದಿಸಲಾಯಿತು. ಬಿಜೆಪಿ ಬದಿಯಡ್ಕ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಮುಂಡೋಳುಮೂಲೆ, ನಮೋ ಬ್ರಿಗೇಡ್ ಸದಸ್ಯರು ಉಪಸ್ಥಿತರಿದ್ದರು.
ಮಾನ್ಯದಲ್ಲಿ ಪೊಲೀಸ್ ಅಧಿಕಾರಿಗಳನ್ನು ಅಭಿನಂದಿಸಲಾಯಿತು. ಬಿಜೆಪಿ ಬದಿಯಡ್ಕ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಮುಂಡೋಳುಮೂಲೆ, ನಮೋ ಬ್ರಿಗೇಡ್ ಸದಸ್ಯರು ಉಪಸ್ಥಿತರಿದ್ದರು.
Published on

ಬದಿಯಡ್ಕ: ಮಾನ್ಯ ಶ್ರೀ ಅಯ್ಯಪ್ಪ ಮಂದಿರದಲ್ಲಿ ನಮೋ ಬ್ರಿಗೇಡ್ ಮಾನ್ಯ ವತಿಯಿಂದ ವಿಶೇಷ ಭಜನಾ ಸೇವೆ ಸೋಮವಾರ ಸಂಜೆ ಜರುಗಿತು. ಕಳೆದ ವರ್ಷ ಮಂದಿರದಿಂದ ಬೆಳ್ಳಿಯ ಛಾಯಾಚಿತ್ರ, ಇನ್ನಿತರ ಪೂಜಾ ಸಾಮಗ್ರಿಗಳ ಕಳವು ಪ್ರಕರಣ ಬೇಧಿಸಿ ಬೆಳ್ಳಿ ಮರಳಿ ಪಡೆದುಕೊಳ್ಳುವಲ್ಲಿ ಯಶಸ್ಸು ಸಾಧಿಸಿದ ತನಿಖಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.

ಬದಿಯಡ್ಕ ಪೊಲೀಸ್ ಠಾಣೆ ತನಿಖಾಧಿಕಾರಿಗಳಾದ ಸಹಾಯಕ ಪೊಲೀಸ್ ಅಧಿಕಾರಿ ಪ್ರಸಾದ್ ಬಿ.ಕೆ., ಮೊಹಮ್ಮದ್ ಆರಿಫ್ ಅವರನ್ನು ನಮೋ ಬ್ರಿಗೇಡ್ ತಂಡದ ಪರವಾಗಿ ಮಂದಿರದ ಕುಂಞಪ್ಪ ಗುರುಸ್ವಾಮಿ, ರಾಮ ಗುರುಸ್ವಾಮಿ ಗೌರವಿಸಿದರು. ಚುಕ್ಕಿನಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದ ಕುಂಞಿಕಣ್ಣ ಗುರುಸ್ವಾಮಿ ಉಪಸ್ಥಿತರಿದ್ದರು.

ಬದಿಯಡ್ಕ ಗ್ರಾಪಂ ಅಧ್ಯಕ್ಷ ಡಿ.ಶಂಕರ, ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ., ಜಿಪಂ ಸದಸ್ಯ ರಾಮಪ್ಪ ಮಂಜೇಶ್ವರ, ಬ್ಲಾಕ್ ಪಂಚಾಯಿತಿ ಸದಸ್ಯ ಮಹೇಶ್ ವಳಕ್ಕುಂಜ, ಗ್ರಾಪಂ ಸದಸ್ಯರಾದ ಅವಿನಾಶ್ ರೈ ಬದಿಯಡ್ಕ, ರಜನಿ ಸಂದೀಪ್, ಬಿಂದ್ಯಾ ಕಾರ್ತಿಕ್, ಹರೀಶ ಮಜಿರ್ಪಳ್ಳಕಟ್ಟೆ ಅವರನ್ನು ಅಯ್ಯಪ್ಪ ಮಂದಿರದ ಸೇವಾ ಸಮಿತಿ ಪರವಾಗಿ ಅಧ್ಯಕ್ಷ ನಾರಾಯಣ ಮಣಿಯಾಣಿ ಅಭಿನಂದಿಸಿದರು. ಬಿಜೆಪಿ ಬದಿಯಡ್ಕ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಮುಂಡೋಳುಮೂಲೆ ಮತ್ತಿತರರು ಉಪಸ್ಥಿತರಿದ್ದರು. ಸುಂದರ ಶೆಟ್ಟಿ ಕೊಲ್ಲಂಗಾನ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net