ದೇಶ-ಧರ್ಮಕ್ಕಾಗಿ ದುಡಿದು ಅಮರರಾಗಿರುವವರು : ಈಶ್ವರ ಕಟೀಲು ನೆನಪು

ದಿ.ಸುಖಾನಂದ ಶೆಟ್ಟಿ, ದಿನೇಶ್ ಅಮೀನ್ ಹಾಗೂ ಪ್ರೇಮನಾಥ್ ಕೋಟ್ಯಾನ್ ಸಂಸ್ಮರಣೆ ಮೂಲ್ಕಿಯಲ್ಲಿ ನಡೆಯಿತು.
ದಿ.ಸುಖಾನಂದ ಶೆಟ್ಟಿ, ದಿನೇಶ್ ಅಮೀನ್ ಹಾಗೂ ಪ್ರೇಮನಾಥ್ ಕೋಟ್ಯಾನ್ ಸಂಸ್ಮರಣೆ ಮೂಲ್ಕಿಯಲ್ಲಿ ನಡೆಯಿತು.
Published on

ಮೂಲ್ಕಿ: ದೇಶ-ಧರ್ಮಕ್ಕಾಗಿ ದುಡಿದು ಸಮಾಜದ ಪಾಲಿಗೆ ಸದಾ ಜೀವಂತವಾಗಿರುವವರು ದಿ.ಸುಖಾನಂದ ಶೆಟ್ಟಿ. ಜಿಲ್ಲೆಯಲ್ಲಿ ಹಿಂದು ಸಂಘಟನೆ ಬಲಿಷ್ಠವಾಗಲು ದಿ.ಸುಖಾನಂದ ಶೆಟ್ಟಿ ಕಾರಣ. ಅವರ ನೆನಪು ಶಾಶ್ವತ ಎಂದು ಬಿಜೆಪಿ ನಾಯಕ ಈಶ್ವರ ಕಟೀಲು ಹೇಳಿದರು.

ಬಿಜೆಪಿ ಮೂಲ್ಕಿ ನಗರ ಹಾಗೂ ಎಸ್.ಎಸ್.ಫ್ರೆಂಡ್ಸ್ ವತಿಯಿಂದ ಆಯೋಜಿಸಲಾದ ಮೂಲ್ಕಿಯ ಹಿಂದು ಸಂಘಟನೆಯ ನಾಯಕರಾದ ದಿ.ಸುಖಾನಂದ ಶೆಟ್ಟಿ, ದಿನೇಶ್ ಅಮೀನ್ ಹಾಗೂ ಪ್ರೇಮನಾಥ್ ಕೋಟ್ಯಾನ್ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುನೀಲ್ ಆಳ್ವ ಮಾತನಾಡಿ, ಹಿಂದುತ್ವದ ಹೋರಾಟಗಾರರಾದ ದಿ.ಸುಖಾನಂದ ಶೆಟ್ಟಿ, ದಿನೇಶ್ ಬಪ್ಪನಾಡು ಹಾಗೂ ಪ್ರೇಮ್ ಚಿತ್ರಾಪು ಬಲಿದಾನವಾದ ಬಳಿಕ ಕಳೆದ 19 ವರ್ಷಗಳಿಂದ ಅವರ ಹೆಸರಿನಲ್ಲಿ ಸಂಘಟನೆ ಮುಖಾಂತರ ಅನೇಕ ಸಾಮಾಜಿಕ ಕಾರ್ಯಕ್ರಮ ನಡೆಯುತ್ತಿದ್ದು ನೆನಪು ಶಾಶ್ವತ ಎಂದರು.

ಬಿಜೆಪಿ ನಾಯಕರಾದ ಭುವನಾಭಿರಾಮ ಉಡುಪ, ಕಸ್ತೂರಿ ಪಂಜ, ಸತೀಶ್ ಅಂಚನ್, ವಿನೋದ್ ಸಾಲ್ಯಾನ್ ಬೆಳ್ಳಾಯರು, ಶ್ಯಾಮ್ ಪ್ರಸಾದ್, ನವೀನ್ ರಾಜ್ ಮತ್ತಿತರರು ಉಪಸ್ಥಿತರಿದ್ದರು. ಶೈಲೇಶ್ ಕುಮಾರ್ ಸ್ವಾಗತಿಸಿದರು. ಪ್ರಶಾಂತ್ ಕೆ.ಎಸ್.ರಾವ್ ನಗರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net