ಕಾಲೇಜು ವಿದ್ಯಾರ್ಥಿ ನಾಪತ್ತೆ

 ಅಬೂಬಕ್ಕರ್
ಅಬೂಬಕ್ಕರ್
Published on

ಉಳ್ಳಾಲ: ದೇರಳಕಟ್ಟೆ ಖಾಸಗಿ ಕಾಲೇಜಿನ ವಿದ್ಯಾರ್ಥಿಯೋರ್ವ ಮೂರು ದಿನಗಳಿಂದ ನಾಪತ್ತೆಯಾಗಿದ್ದು, ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇರಳ ಪಾಲಕ್ಕಾಡ್ ನಿವಾಸಿ ಅಬೂಬಕ್ಕರ್ ಎಂಬುವರ ಪುತ್ರ ಮಾಲೀಕ್ ಅಬೂಬಕ್ಕರ್ ನಾಪತ್ತೆಯಾದವರು. ದೇರಳಕಟ್ಟೆ ಖಾಸಗಿ ಕಾಲೇಜಿನಲ್ಲಿ ಬಿಎನ್‌ವೈಎಸ್ ಶಿಕ್ಷಣ ಪಡೆಯುತ್ತಿದ್ದ ಅವರು ಪಿ.ಜಿ.ಯಲ್ಲಿ ವಾಸವಾಗಿದ್ದರು. ನ.13ರಂದು ರಾತ್ರಿ ಊಟಕ್ಕೆಂದು ಹೊರಗಡೆ ಹೋಗಿ ಹಿಂದಿರುಗಿಲ್ಲ. ಸೋದರ ಮಾವ ಫಿಸಿಯೋಥೆರಪಿ ವೈದ್ಯ ಅಝ್ಮಲ್ ಟಿ.ಎ. ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net