ಜ.9ರಿಂದ 11ರವರೆಗೆ ಕದ್ರಿ ಪಾರ್ಕ್ ರಸ್ತೆಯಲ್ಲಿ ಪೈಂಟಿಂಗ್ ಹಾಗೂ ಕಲಾಪರ್ಬ ನಡೆಯಲಿದೆ. ಜ.9ರಿಂದ 11ರವರೆಗೆ ತಣ್ಣೀರುಬಾವಿ ಬೀಚ್‌ನಲ್ಲಿ ಸ್ಟಾರ್ಟ್ ಅಪ್ ಕಾನ್‌ಕ್ಲೇವ್, ಟ್ಯಾಲೆಂಟ್ ಶೋ, ಮನರಂಜನಾ ಕಾರ್ಯಕ್ರಮಗಳು, ಟ್ರಯಾತ್ಲಾನ್ ಮತ್ತು ಇತರ ಕ್ರೀಡಾಕೂಟಗಳು ನಡೆಯಲಿವೆ. ಜ.10,11ರಂದು ಸಸಿಹಿತ್ಲು ಬೀಚ್‌ನಲ್ಲಿ ಸ್ಟಾಂಡ್ ಅಪ್ ಪೆಡಲ್ ರೇಸ್, ಕಯಾಕ್ ರೇಸ್, ನಾಡದೋಣಿ ರೇಸ್, ಸಾಂಸ್ಕೃತಿಕ ಕಾರ್ಯಕ್ರಮಗಳು, ಸೀಫುಡ್ ಉತ್ಸವ ನಡೆಯಲಿದೆ. ಜ.10,11ರಂದು ಪಿಲಿಕುಳ ಗಾಲ್ಫ್ ಮೈದಾನದಲ್ಲಿ ಗಾಲ್ಫ್ ಟೂರ್ನಮೆಂಟ್, ಜ.17ರಿಂದ 19ರವರೆಗೆ ಪಣಂಬೂರು ಬೀಚ್‌ನಲ್ಲಿ ಜಾವೇದ್ ಅಲಿ ನೈಟ್ ಮತ್ತು ಮರಳು ಶಿಲ್ಪ, ಡಿ.23ರಂದು ತಣ್ಣೀರುಬಾವಿ ಬೀಚ್‌ನಲ್ಲಿ ಡಾನ್ಸ್ ಫೆಸ್ಟಿವಲ್, ಜ.17, 18ರಂದು ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಆಯೋಜಿಸಲಾಗಿದೆ ಎಂದರು.