ಬೆಳಗ್ಗೆಯಿಂದ ಸಂಜೆ ತನಕ ನಡೆದ ಕಾರ್ಯಾಚರಣೆಯಲ್ಲಿ 50ಕ್ಕೂ ಅಧಿಕ ಪೆಟ್ಟಿಗೆ ಅಂಗಡಿಗಳ ತೆರವುಗೊಳಿಸಿದ್ದು, ಫೆ.2ರಂದು ಹೆದ್ದಾರಿ ಸಮೀಪದಲ್ಲಿರುವ ಪೆಟ್ಟಿಗೆ ಅಂಗಡಿಗಳು, ಬೀದಿಬದಿ ವ್ಯಾಪಾರದ ಶೆಡ್‌ಗಳ ತೆರವುಗೊಳಿಸುವಂತೆ ಸೂಚನೆ ನೀಡಲಾಗಿತ್ತು. ತೊಕ್ಕೊಟ್ಟು, ಚೆಂಬುಗುಡ್ಡೆ, ಪಂಡಿತ್ ಹೌಸ್, ಕುತ್ತಾರ್, ಯೇನೆಪೊಯ ವಿವಿ ಬಳಿ, ನಿತ್ಯಾನಂದ ನಗರ, ಕೆ.ಎಸ್.ಹೆಗ್ಡೆ, ಕಣಚೂರು, ನಾಟೆಕಲ್, ಅಸೈಗೋಳಿವರೆಗೂ ಹೆದ್ದಾರಿಯ ಇಕ್ಕೆಲಗಳಲ್ಲಿದ್ದ ಅಂಗಡಿಗಳ ತೆರವುಗೊಳಿಸಲಾಯಿತು. ಉಳ್ಳಾಲ ನಗರಸಭೆ ವ್ಯಾಪ್ತಿಗಳಲ್ಲಿ ಬಸ್ಸು ನಿಲ್ದಾಣದ 100 ಮೀ.ಅಂತರದಲ್ಲಿ ಮೀನು ಮಾರಾಟ ನಡೆಸದಂತೆ ಸೂಚನೆ ನೀಡಲಾಗಿದ್ದು, ಸೂಚನೆ ಉಲ್ಲಂಘಿಸಿದವರ ವಿರುದ್ಧ ಸ್ಥಳೀಯಾಡಳಿತ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.