ನಗರದ ರೊಸಾರಿಯೋ ಕೆಥೆಡ್ರಲ್, ಮಿಲಾಗ್ರಿಸ್, ಲೇಡಿಹಿಲ್, ಅಶೋಕನಗರ, ಕೂಳೂರು, ಬೆಂದುರ್ ಸೇರಿದಂತೆ ನಗರದ ಪ್ರಮುಖ ಚರ್ಚ್‌ಗಳಲ್ಲಿ ಭಕ್ತರು ಗುರುವಾರ ಬಲಿಪೂಜೆಯಲ್ಲಿ ಬಹಳ ಸಂಭ್ರಮದಿಂದ ಭಾಗವಹಿಸಿ ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಉಳಿದಂತೆ ಕ್ರೈಸ್ತರು ತಮ್ಮ ಕುಟುಂಬದ ಹಿರಿಯರ ಮನೆಗೆ ಹೋಗಿ ಅವರ ಸಂಭ್ರಮದಲ್ಲಿ ಭಾಗವಹಿಸಿದರು. ಹಬ್ಬದ ಅಂಗವಾಗಿ ಕುಸ್ವಾರ್‌ಗಳನ್ನು ಕಷ್ಟದಲ್ಲಿ ಇರುವ ಮಂದಿಗೆ ಹಂಚುವ ಕೆಲಸವನ್ನು ಮಾಡಿದರು. ಸಂಜೆ ಕೆಲವು ಚಚ್‌ಗಳಲ್ಲಿ ಕ್ರಿಸ್ಮಸ್ ಹಬ್ಬದ ಕಾರ್ಯಕ್ರಮಗಳು ಜರುಗಿತು.