ಗ್ರಾಮೀಣ ಜನರ ಶ್ರೇಯೋಭಿವೃದ್ಧಿಗೆ ಯೋಜನೆ : ಕುಸುಮಾ ಚಂದ್ರಶೇಖರ್ ಅನಿಸಿಕೆ

ಪಡುಪಣಂಬೂರು ಗ್ರಾಪಂ ಮಕ್ಕಳ ವಿಶೇಷ ಗ್ರಾಮಸಭೆಯಲ್ಲಿ ಪಿಡಿಒ ಸುಧೀರ್ ಮಾಹಿತಿ ನೀಡಿದರು.
ಪಡುಪಣಂಬೂರು ಗ್ರಾಪಂ ಮಕ್ಕಳ ವಿಶೇಷ ಗ್ರಾಮಸಭೆಯಲ್ಲಿ ಪಿಡಿಒ ಸುಧೀರ್ ಮಾಹಿತಿ ನೀಡಿದರು.
Published on

ಮೂಲ್ಕಿ: ಗ್ರಾಮೀಣ ಮಹಿಳೆಯರು ಮತ್ತು ಮಕ್ಕಳ ಶ್ರೇಯೋಭಿವೃದ್ಧಿಯನ್ನು ಮುಖ್ಯ ಗುರಿಯಾಗಿಸಿ ಪಂಚಾಯಿತಿ ವಿಶೇಷ ಯೋಜನೆ ಹಮ್ಮಿಕೊಂಡಿದ್ದು, ಗ್ರಾಮಸ್ಥರ ಸಹಕಾರ ಅಗತ್ಯ ಎಂದು ಪಡುಪಣಂಬೂರು ಪಂಚಾಯಿತಿ ಅಧ್ಯಕ್ಷೆ ಕುಸುಮಾ ಚಂದ್ರಶೇಖರ್ ಹೇಳಿದರು.

ಪಡುಪಣಂಬೂರು ಗ್ರಾಪಂ 2025-26ನೇ ಸಾಲಿನ ಮಕ್ಕಳ ವಿಶೇಷ ಗ್ರಾಮಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಕ್ಕಳ ಗ್ರಾಮಸಭೆಯ ಸಭಾಧ್ಯಕ್ಷರಾಗಿ ತೋಕೂರು ರಾಮಣ್ಣಶೆಟ್ಟಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿನಿ ಚಾರುಷಿ ಮನೀಷ್ ಎಸ್., ಪಂಚಾಯಿತಿ ಉಪಾಧ್ಯಕ್ಷ ಹೇಮನಾಥ ಅಮೀನ್, ಸದಸ್ಯರಾದ ವಿನೋದ್ ಎಸ್.ಸಾಲ್ಯಾನ್, ಅನಿಲ್ ಯಾನೆ ಸೀತಾರಾಮ, ಪಿಡಿಒ ಸುಧೀರ್, ಕಾರ್ಯದರ್ಶಿ ಸುಜಾತಾ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಜ್ಯೋತಿ ಖಾರ್ವಿ, ಮಕ್ಕಳ ಸಹಾಯವಾಣಿ ಇಲಾಖೆಯ ರೇವತಿ, ಪಂಚಾಯಿತಿ ವ್ಯಾಪ್ತಿಗೊಳಪಡುವ ಎಲ್ಲ ಶಾಲೆಯ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಅಧಿಕಾರಿಗಳು, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾಜಲ್ ದ.ಕ. ಜಿಪಂ ಹಿರಿಯ ಪ್ರಾಥಮಿಕ ಶಾಲೆ ಪಡುಪಣಂಬೂರು ಸ್ವಾಗತಿಸಿದರು. ವೈಭವ್ ದ.ಕ. ಜಿಪಂ ಹಿರಿಯ ಪ್ರಾಥಮಿಕ ಶಾಲೆ ಕೆರೆಕಾಡು ನಿರೂಪಿಸಿದರು. ಹಿಂದೂಸ್ತಾನಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿ ಕಾವ್ಯ ತೋಕೂರು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net