ಜನಾರ್ದನ ಕ್ಷೇತ್ರದಲ್ಲಿ ಚಂದ್ರಮಂಡಲ ರಥೋತ್ಸವ ಸಂಪನ್ನ

  ಶ್ರೀ ಜನಾರ್ದನ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಪ್ರಯುಕ್ತ ನಡೆದ ದರ್ಶನ ಬಲಿ.
ಶ್ರೀ ಜನಾರ್ದನ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಪ್ರಯುಕ್ತ ನಡೆದ ದರ್ಶನ ಬಲಿ.
Published on
ದೇವಸ್ಥಾನ ಆನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ನಾಯರ ನೇತೃತ್ವ, ತಂತ್ರಿ ಶ್ರೀನಿವಾಸ ಹೊಳ್ಳರ ಧಾರ್ಮಿಕ ವಿಧಿ ವಿಧಾನ ನಡೆಯಿತು.
ಬುಧವಾರ ಬೆಳಗ್ಗೆ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಿತು. ಮಧ್ಯಾಹ್ನ ಅರ್ಚಕ ರಾಮಚಂದ್ರ ಹೊಳ್ಳರಿಂದ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಪಲ್ಲಪೂಜೆ ನಡೆದು ಪ್ರವೀಣ್ ಕುಮಾರ್ ಇಂದ್ರ, ಗಣೇಶ್ ಅವರ ಸೇವಾರ್ಥ ಅನ್ನಸಂತರ್ಪಣೆ ನಡೆಯಿತು. ಅರುಣಕುಮಾರ್, ಭರತ್ ಕುಮಾರ್, ರಾಮಚಂದ್ರ ಶೆಟ್ಟಿ, ವಿಧಾನಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ಸಿರಿ ಸಂಸ್ಥೆ ಎಂಡಿ ಕೆ.ಎನ್.ಜನಾರ್ದನ್ ಮೊದಲಾದವರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net