ಮನೆಯಲ್ಲಿ ನಗ, ನಗದು ಕಳವು

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಉಪ್ಪಳ ಬಪ್ಪಾಯಿತೊಟ್ಟಿ ನಿವಾಸಿ ರುಕ್ಸಾನಾ ಎಂಬುವರ ಮನೆ ಕಪಾಟಿನಲ್ಲಿರಿಸಿದ್ದ 23.5 ಪವನ್ ಚಿನ್ನ ನಾಪತ್ತೆಯಾಗಿದೆ. ರುಕ್ಸಾನಾ ಅವರ ಪುತ್ರಿ ವಿವಾಹ ಜ.23ರಂದು ನಡೆದಿತ್ತು. ಇದಕ್ಕೂ ಮೊದಲು ಮನೆಯಲ್ಲಿ ನಡೆದಿದ್ದ ವಿವಿಧ ಕೆಲಸದ ಮಧ್ಯೆ ಚಿನ್ನ ನಾಪತ್ತೆಯಾಗಿರಬೇಕೆಂದು ಸಂಶಯಿಸಲಾಗಿದೆ. ಮದುವೆ ದಿನದಂದು ಚಿನ್ನ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net