ಅಪ್ರಾಪ್ತರಿಗೆ ವಾಹನ ನೀಡಿದ ಮೂವರ ವಿರುದ್ಧ ಕೇಸು

ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲು
crime
crime
Published on: 

ಕಾಸರಗೋಡು: ಅಪ್ರಾಪ್ತರಿಗೆ ಚಲಾಯಿಸಲು ವಾಹನ ನೀಡಿದ ಮೂವರ ವಿರುದ್ಧ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಬಂದ್ಯೋಡಿನಲ್ಲಿ ಕುಂಬಳೆ ಠಾಣೆ ಪೊಲೀಸರು ಮಂಗಳವಾರ ನಡೆಸಿದ ಕಾರ್ಯಾಚರಣೆ ವೇಳೆ ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದ ಸ್ಕೂಟರ್ ವಶಕ್ಕೆ ತೆಗೆದುಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಸ್ಕೂಟರ್ ಮಾಲೀಕ ಮೊಗ್ರಾಲ್ ನಿರೋಳಿ ನಿವಾಸಿ ಅಹಮ್ಮದ್ ಅಫಲ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಶಿರಿಯ ಕುನ್ನಿಲ್‌ನಲ್ಲಿ ಬಾಲಕ ಚಲಾಯಿಸುತ್ತಿದ್ದ ಸ್ಕೂಟರ್ ಪೊಲೀಸರು ವಶಕ್ಕೆ ತೆಗೆದುಕೊಂಡು, ಮಾಲೀಕ ಇಚ್ಲಂಗೋಡು ಪಚ್ಚಂಬಳ ನಿವಾಸಿ ಮುಹಮ್ಮದ್ ಜಬೀಲ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೇ ಸ್ಥಳದಲ್ಲಿ ಪೊಲೀಸರು ನಡೆಸಿದ ಇನ್ನೊಂದು ಕಾರ್ಯಾಚರಣೆಯಲ್ಲಿ ಬಾಲಕ ಚಲಾಯಿಸುತ್ತಿದ್ದ ಕಾರು ವಶಪಡಿಸಿಕೊಂಡು, ಕಾರು ಮಾಲೀಕ ಉಪ್ಪಳ ಪಚ್ಚಂಬಳದ ಮೂಸಾಕುಞಿ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.