ಏಕಾಏಕಿ ಚಲಿಸಿ ಮೆಡಿಕಲ್ ಶಾಪ್‌ಗೆ ನುಗ್ಗಿದ ಕಾರು

ನಾಲ್ವರು ಪ್ರಾಣಾಪಾಯದಿಂದ ಪಾರು
crime
CRIME
Published on: 

ಬೆಳ್ತಂಗಡಿ: ಚಾರ್ಮಾಡಿ ರಸ್ತೆಯಲ್ಲಿರುವ ಮೆಡಿಕಲ್ ಶಾಪ್‌ಗೆ ಕಾರು ನುಗ್ಗಿದ ಘಟನೆ ಶನಿವಾರ ನಡೆದಿದೆ. ಮೆಡಿಕಲ್‌ಗೆ ಅಲ್ಪಸ್ವಲ್ಪ ಹಾನಿಯಾಗಿದ್ದು, ಮುಂಭಾಗದಲ್ಲಿದ್ದ ನಾಲ್ವರು ಅಪಾಯದಿಂದ ಪಾರಾಗಿದ್ದಾರೆ. ಉಜಿರೆ ಚಾರ್ಮಾಡಿ ರಸ್ತೆಯಲ್ಲಿ ಹೊಸದಾಗಿ ಸರ್ವೀಸ್ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಈ ರಸ್ತೆಯಲ್ಲಿ ಕಾರನ್ನು ನಿಲ್ಲಿಸಿ ಚಾಲಕ ಇಳಿದು ಹೋಗಿದ್ದಾರೆ. ಕಾರು ಏಕಾಏಕಿ ಚಲಿಸಿ ರಸ್ತೆ ಕೆಳಭಾಗದಲ್ಲಿದ್ದ ಮೆಡಿಕಲ್‌ಗೆ ನುಗ್ಗಿದೆ. ಕಾರು ಮೆಡಿಕಲ್ ಶಾಪ್‌ನತ್ತ ಬರುತ್ತಿರುವುದನ್ನು ಗಮನಿಸಿದ ನಾಲ್ವರು ತಕ್ಷಣವೇ ಪಕ್ಕಕ್ಕೆ ಓಡಿ ಪಾರಾಗಿದ್ದಾರೆ.

ಕಲ್ಮಂಜದಲ್ಲಿ ಕಾಡಾನೆ ದಾಳಿಗೆ ಕೃಷಿ ಹಾನಿ

ಬೆಳ್ತಂಗಡಿ: ಕಲ್ಮಂಜ ಗ್ರಾಮದ ಕುಳೆಂಜಿರೋಡಿ ಪರಿಸರದಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ಶುಕ್ರವಾರ ತಡರಾತ್ರಿ ತೋಟಗಳಿಗೆ ನುಗ್ಗಿದ ಕಾಡಾನೆಯೊಂದು ಕೃಷಿ ಬೆಳೆ ಹಾನಿಗೊಳಿಸಿದೆ. ಕುಳೆಂಜಿರೋಡಿಯ ಮಹೇಂದ್ರ ಪರಾಂಜಪೆ ಹಾಗೂ ರಾಮಚಂದ್ರ ಭಟ್ ಎಂಬುವರ ತೋಟಗಳಿಗೆ ತಡರಾತ್ರಿ ದಾಳಿ ನಡೆಸಿದ ಕಾಡಾನೆ ಎರಡು ತೆಂಗಿನ ಮರಗಳು, ಹತ್ತಕ್ಕೂ ಅಧಿಕ ಅಡಿಕೆ ಮರ ಹಾಗೂ ಬಾಳೆ ಕೃಷಿಗೆ ಹಾನಿ ಉಂಟುಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net