

ಪುತ್ತೂರು ಗ್ರಾಮಾಂತರ: ಕಾರೊಂದು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಇಬ್ಬರು ಗಂಭೀರ ಗಾಯಗೊಂಡ ಟನೆ ನೆಟ್ಟಣಿಗೆ ಮುಡ್ನೂರು ಗ್ರಾಮದ ಸುರಳಿಮೂಲೆ ಎಂಬಲ್ಲಿ ಪಂಚೋಡಿಕರ್ನೂರು ಗಾಳಿಮುಖ ರಸ್ತೆಯಲ್ಲಿ ನಡೆದಿದೆ.
ಕರ್ನೂರಿನಿಂದ ಈಶ್ವರಮಂಗಲ ಕಡೆಗೆ ರಾಜೇಶ್ ರೈ ಎಂಬುವರು ಚಲಾಯಿಸಿಕೊಂಡು ಬರುತ್ತಿದ್ದ ಸ್ವ್‌ಟಿ ಡಿಸೈರ್ ಕಾರು ನಿಯಂತ್ರಣ ಕಳಕೊಂಡು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಅರಿಯಡ್ಕ ಗ್ರಾಮದ ಲೋಕೇಶ್ ಮತ್ತು ವಾಣಿಯ ಜಯ ಎಂಬುವರು ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಚಾಲಕ ನೆಟ್ಟಣಿಗೆ ಮುಡ್ನೂರು ಗ್ರಾಮದ ಕರ್ನೂರು ಮದಕ ನಿವಾಸಿ ರಾಜೇಶ್ ರೈ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ರಾಜೇಶ್ ರೈ ಕರ್ನೂರು ಮದಕದಲ್ಲಿ ಹಾಳೆ ತಟ್ಟೆ ತಯಾರಿ ಟಕ ಹೊಂದಿದ್ದು, ಗಾಯಗೊಂಡವರು ಟಕದ ಕಾರ್ಮಿಕರೆಂದು ತಿಳಿದು ಬಂದಿದೆ. ಟನೆಗೆ ಸಂಬಂಧಿಸಿ ಅಮರನಾಥ ಆಳ್ವ ಕರ್ನೂರುಗುತ್ತು ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.