ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ಕಾರು ಡಿಕ್ಕಿ

ಚಾಲಕ, ಕುಟುಂಬದವರು ಅಪಾಯದಿಂದ ಪಾರು
ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ಇಕೋ ಕಾರು ಡಿಕ್ಕಿ
ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ಇಕೋ ಕಾರು ಡಿಕ್ಕಿ
Published on: 

ಉಪ್ಪಿನಂಗಡಿ: ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ಇಕೋ ಕಾರು ಡಿಕ್ಕಿಯಾದ ಘಟನೆ ಬುಧವಾರ ಮಧ್ಯಾಹ್ನ ನೆಲ್ಯಾಡಿ ಸಮೀಪದ ದೊಂತಿಲ ಎಂಬಲ್ಲಿ ಸಂಭವಿಸಿದೆ. ಕಾರು ಚಾಲಕ ಹಾಗೂ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ನೆಲ್ಯಾಡಿ-ಬಲ್ಯ ರಸ್ತೆಯಲ್ಲಿ ನೆಲ್ಯಾಡಿಯಿಂದ ಬಲ್ಯ ಕಡೆಗೆ ಬಲ್ಯ ನಿವಾಸಿ ಸುಂದರ ಆಳ್ವ ಎಂಬುವರು ಚಲಾಯಿಸುತ್ತಿದ್ದ ಇಕೋ ಕಾರು ವಿದ್ಯುತ್ ಪರಿವರ್ತಕಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಒಂದು ಕಂಬ ತುಂಡಾಗಿ ಕಂಬ ಹಾಗೂ ತಂತಿಗಳು ಕಾರಿನ ಮೇಲೆ ಬಿದ್ದಿವೆ. ಘಟನೆ ವೇಳೆ ವಿದ್ಯುತ್ ಪ್ರವಹಿಸುತ್ತಿದ್ದರೂ ಅದೃಷ್ಟವಶಾತ್ ಟ್ರಿಪ್ ಆಗಿ ಅಫ್ ಆಗಿದೆ. ಸುಂದರ ಆಳ್ವ, ಅವರ ಪತ್ನಿ ಹಾಗೂ ಸೊಸೆ ಅಪಾಯದಿಂದ ಪಾರಾಗಿದ್ದಾರೆ.