ಕೆನರಾ ಹೈಸ್ಕೂಲ್(ಮೈನ್) ಎಸ್ಸೆಸ್ಸೆಲ್ಸಿ ಸಾಧಕರಿಗೆ ಗೌರವ

ಈಬಾರಿಯ ಎಸ್ಸೆಸ್ಸೆಲ್ಸಿಯಲ್ಲಿ ಅತ್ಯುತ್ತಮ ಅಂಕ ಪಡೆದ ಡೊಂಗರಕೇರಿ ಕೆನರಾ ಹೈಸ್ಕೂಲ್(ಮೈನ್)ನ ಸಾಧಕ ವಿದ್ಯಾರ್ಥಿಗಳಿಗೆ ಅವರ ಪೋಷಕರೊಂದಿಗೆ ಸನ್ಮಾನ ಕಾರ್ಯಕ್ರಮ ಡೊಂಗರಕೇರಿ ಕೆನರಾ ಹೈಸ್ಕೂಲ್( ಮೈನ್) ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.
ಈಬಾರಿಯ ಎಸ್ಸೆಸ್ಸೆಲ್ಸಿಯಲ್ಲಿ ಅತ್ಯುತ್ತಮ ಅಂಕ ಪಡೆದ ಡೊಂಗರಕೇರಿ ಕೆನರಾ ಹೈಸ್ಕೂಲ್(ಮೈನ್)ನ ಸಾಧಕ ವಿದ್ಯಾರ್ಥಿಗಳಿಗೆ ಅವರ ಪೋಷಕರೊಂದಿಗೆ ಸನ್ಮಾನ ಕಾರ್ಯಕ್ರಮ ಡೊಂಗರಕೇರಿ ಕೆನರಾ ಹೈಸ್ಕೂಲ್( ಮೈನ್) ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.
Published on
ಮಂಗಳೂರು: ಈಬಾರಿಯ ಎಸ್ಸೆಸ್ಸೆಲ್ಸಿಯಲ್ಲಿ ಅತ್ಯುತ್ತಮ ಅಂಕ ಪಡೆದ ಡೊಂಗರಕೇರಿ ಕೆನರಾ ಹೈಸ್ಕೂಲ್(ಮೈನ್)ನ ಸಾಧಕ ವಿದ್ಯಾರ್ಥಿಗಳಿಗೆ ಅವರ ಪೋಷಕರೊಂದಿಗೆ ಸನ್ಮಾನ ಕಾರ್ಯಕ್ರಮ ಡೊಂಗರಕೇರಿ ಕೆನರಾ ಹೈಸ್ಕೂಲ್( ಮೈನ್) ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.
ಕೆನರಾ ಪಿಯು ಕಾಲೇಜಿನ ಸಂಚಾಲಕ ಟಿ.ಗೋಪಾಲಕೃಷ್ಣ ಶೆಣೈ ಮಾತನಾಡಿ, ಪ್ರಸಕ್ತ ಸಾಲಿನ ಎಸೆಸೆಲ್ಸಿ ವಿದ್ಯಾರ್ಥಿಗಳ ಸಾಧನೆಯ ಬಗ್ಗೆ ಹೆಮ್ಮೆ ಇದೆ. ವಿದ್ಯಾರ್ಥಿಗಳ ಸಾಧನೆಯ ಹಿಂದೆ ಶಿಕ್ಷಕರು ಹಾಗೂ ಪೋಷಕರ ಶ್ರಮ ಅನನ್ಯ. ಸಂಸ್ಥೆಯ ಕನ್ನಡ ಮಾಧ್ಯಮ ವಿದ್ಯಾರ್ಥಿನಿ ಬಿ. ಶ್ರೀನಿಧಿ ಶೆಣೈ ರಾಜ್ಯಕ್ಕೆ ಮೂರನೇ ಸ್ಥಾನ ಪಡೆಯಲು ಅವಳ ಶ್ರಮ ಪ್ರಮುಖವಾಗಿದೆ. ಯಾವುದೇ ಟ್ಯೂಷನ್ ಪಡೆಯದೆ ಈ ಸಾಧನೆ ಸಾಧ್ಯವಾಗಿದೆ. ಇದು ಒಂದು ಹಂತದ ಸಾಧನೆಯಾಗಿದ್ದು, ಪಿ.ಯು.ಸಿಯಲ್ಲೂ ಸಾಧನೆ ಮುಂದುವರೆಯಬೇಕು ಎಂದರು.
ಕೆನರಾ ಹೈಸ್ಕೂಲ್( ಮೈನ್)ನ ಮುಖ್ಯಶಿಕ್ಷಕರಾದ ಅರುಣಾಕುಮಾರಿ ಮಾತನಾಡಿ, ಕೆನರಾ ಹೈಸ್ಕೂಲ್‌ನ ಕನ್ನಡ ಮಾಧ್ಯಮದ ವಿದ್ಯಾರ್ಥಿ ಈ ಬಾರಿ ಜಿಲ್ಲೆಗೆ ಪ್ರಥಮ ಟಾಪರ್ ಆಗಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಕಲಿಕೆಯ ವಿಚಾರದಲ್ಲಿ ಮಾತ್ರವಲ್ಲ ಇತರ ಪಠ್ಯೇತರ ವಿಚಾರದಲ್ಲೂ ಸಾಕಷ್ಟು ಮುಂದೆ ಇದ್ದಾರೆ. 8 ಮಂದಿ 600ಕ್ಕಿಂತ ಹೆಚ್ಚು ಅಂಕ ಪಡೆದವರಿದ್ದಾರೆ. ಯಾವುದೇ ಟ್ಯೂಶನ್ ಇಲ್ಲದೇ ಬರೀ ತರಗತಿಯ ಪಾಠದಿಂದಲ್ಲೇ ಈ ಸಾಧನೆಯನ್ನು ಮಾಡಿದ್ದಾರೆ ಎಂದರು.
ಡೊಂಗರಕೇರಿ ಕೆನರಾ ಹೈಸ್ಕೂಲ್ ಮೈನ್‌ನ ಸಂಚಾಲಕರಾದ ಅಶ್ವಿನಿ ಕಾಮತ್, ಕೆನರಾ ಹೈಸ್ಕೂಲ್ ಉರ್ವದ ಸಂಚಾಲಕ ಯೋಗೇಶ್ ಕಾಮತ್ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕರಾದ ವಿದ್ಯಾಶೆಟ್ಟಿ ಕರ‌್ಯಕ್ರಮ ನಿರೂಪಿಸಿದರು. ಸಾರಿಕಾ ವಂದಿಸಿದರು.
ರಾಜ್ಯ ಮಟ್ಟದಲ್ಲಿ 3ನೇ ಸ್ಥಾನ ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿ ಟಾಪರ್ ಆಗಿರುವ ಬಿ.ಶ್ರೀನಿಧಿ ಶೆಣೈ(623) ಹಾಗೂ 600ಕ್ಕಿಂತ ಹೆಚ್ಚು ಅಂಕಗಳಿಸಿದ ಸಂಸ್ಥೆಯ ವಿದ್ಯಾರ್ಥಿಗಳನ್ನು ಅವರ ಪೋಷಕರೊಂದಿಗೆ ಗೌರವಿಸಲಾಯಿತು.
-----------------
ವಿದ್ಯಾರ್ಥಿಗಳ ಸಾಧನೆಯ ಕುರಿತು ಸಂಸ್ಥೆಗೆ ಹೆಮ್ಮೆಯಿದೆ. ವಿದ್ಯಾರ್ಥಿಗಳು ತಾವು ಕಲಿತಿರುವುದನ್ನು ಫಲಿತಾಂಶದಲ್ಲಿ ತೋರಿಸಿದ್ದಾರೆ. ಅನೇಕ ನಿದ್ದೆಗೆಟ್ಟ ರಾತ್ರಿಗಳು, ಬೆಳಗ್ಗೆ ಬೇಗನೆ ಎದ್ದು ಅಭ್ಯಾಸ ಸಹಿತ ವಿವಿಧ ಪರಿಶ್ರಮಕ್ಕೆ ಫಲಸಿಕ್ಕಿದೆ. ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಹೆತ್ತವರ ಸಹಕಾರ ಪ್ರೋತ್ಸಾಹದಿಂದ ಉತ್ತಮ ಫಲಿತಾಂಶ ಬಂದಿದೆ. ಕೆನರಾ ಹೈಸ್ಕೂಲ್ ಗಳಲ್ಲಿ ಟಾಪರ್ ಗಳಾಗಿರುವ ವಿದ್ಯಾರ್ಥಿಗಳಿಗೆ ಕೆನರಾ ಪಿಯು ಕಾಲೇಜಿನಲ್ಲಿ ಉಚಿತ ಪಿಯು ಶಿಕ್ಷಣ ಹಾಗೂ 610 ಮೇಲ್ಪಟ್ಟವರಿಗೆ ಹಾಗೂ 600 ಕ್ಕಿಂತ ಜಾಸ್ತಿ ಅಂಕ ಬಂದವರಿಗೆ ಪ್ರತ್ಯೇಕ ಶುಲ್ಕ ವಿನಾಯಿತಿ ನೀಡಲಾಗುವುದು.
-ಅಶ್ವಿನಿ ಕಾಮತ್, ಸಂಚಾಲಕರು
ಡೊಂಗರಕೇರಿ ಕೆನರಾ ಹೈಸ್ಕೂಲ್ ಮೈನ್
------------------
ಕೆನರಾ ವಿದ್ಯಾಸಂಸ್ಥೆಯ ಗುಣಮಟ್ಟದ ಶಿಕ್ಷಣ ಹಾಗೂ ಶಿಕ್ಷಕರ ಮಾರ್ಗದರ್ಶನ, ವಿದ್ಯಾರ್ಥಿಗಳಲ್ಲಿ ಜ್ಞಾನ ಸಂಪದಾನೆಗೆ ಪೂರಕವಾದ ವ್ಯವಸ್ಥೆ ಕಲ್ಪಸಿರುವುದರಿಂದ ಟಾಪರ್ ಆಗಿ ಮೂಡಿಬರಲು ಸಾಧ್ಯವಾಗಿದೆ.ಕಠಿಣ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿದರೆ ಹೆಚ್ಚು ಅಂಕ ಗಳಿಸಬಹುದು ಎಂಬ ಮಾರ್ಗದರ್ಶನವನ್ನು ಇಲ್ಲಿನ ಶಿಕ್ಷಣ ವ್ಯವಸ್ಥೆ ಕಲ್ಪಿಸಿರುವುದರಿಂದ ಹೆಚ್ಚು ಅಂಕ ಗಳಿಸಲು ಸಾಧ್ಯವಾಗಿದೆ. ಶಿಕ್ಷಕವೃಂದದ ಮಾರ್ಗದರ್ಶನ, ಕಠಿಣ ಪರಿಶ್ರಮ ಮತ್ತು ಏಕಾಗ್ರತೆಯ ಅಧ್ಯಯನ ಅಧಿಕ ಅಂಕಗಳಿಗೂ ಕಾರಣ.
-ಬಿ.ಶ್ರೀನಿಧಿ ಶೆಣೈ, ರಾಜ್ಯ ಮಟ್ಟದಲ್ಲಿ 3ನೇ ಸ್ಥಾನ ಗಳಿಸಿದ ಎಸ್ಸೆಸ್ಸೆಲ್ಸಿ ಟಾಪರ್
--------------------
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net