

ಬೇಲೂರು: ರೈತರ ಕೊಳವೆ ಬಾವಿಗಳ ಕೇಬಲ್ ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಶುಕ್ರವಾರ ಒಪ್ಪಿಸಿದ್ದಾರೆ. ಅರಕಲಗೂಡಿನ ಕುಮಾರ್, ಬೆಳ್ತಂಗಡಿಯ ಆನಂದ್ ಬಂಧಿತರು.
ಪಟ್ಟಣ ಸಮೀಪದ ರಾಯಾಪುರ ಗ್ರಾಮದ ಸುತ್ತಮುತ್ತಲಿನ ಜಮೀನುಗಳ ಪಂಪ್‌ಸೆಟ್‌ಗಳ ಕೇಬಲ್‌ಗಳು ಎರಡು ಮೂರು ತಿಂಗಳಿಂದ ಕಳ್ಳತನವಾಗುತ್ತಿದ್ದವು. ಕೆಲವೆಡೆ ಮೋಟಾರ್ ಪಂಪ್‌ಗಳನ್ನು ಕಳ್ಳತನ ಮಾಡಲಾಗಿತ್ತು. ಶುಕ್ರವಾರ ಆರೋಪಿಗಳಿಬ್ಬರು ವಿದ್ಯುತ್ ಕೇಬಲ್ ಕಳ್ಳತನ ಮಾಡಿಕೊಂಡು ಹೋಗುತ್ತಿದ್ದ ಸಂದರ್ಭ ಗ್ರಾಮಸ್ಥರು ಅವರನ್ನು ಬೆನ್ನಟ್ಟಿ ಹಿಡಿದಿದ್ದಾರೆ.