

ಮೂಡುಬಿದಿರೆ: ಸಿಎ ಇಂಟರ್ ಮೀಡಿಯೆಟ್ ಪರೀಕ್ಷೆಯಲ್ಲಿ ಆಳ್ವಾಸ್‌ನ ಬಿ.ಕಾಂ. ವಿದ್ಯಾರ್ಥಿಗಳಾದ ಶರಣ್ಯ ಬಂಗೇರ, ಭವಿತ್ ಹೆಗ್ಡೆ, ಶ್ರೀರಾಗ್ ಸಿ., ರಕ್ಷಿತ್ ಆರ್.ದೇವಾಡಿಗ, ಜೊಸ್ವಿನ್, ಖುಷಿ ಆರ್.ಪೂಜಾರಿ, ಪೂರ್ವಿಕಾ, ಧನ್ಯಾ ಆರ್., ಅನೂಪ್ ಹಾಗೂ ಕೌಶಿಕ್ ಗ್ರೂಪ್-1 ಮತ್ತು ಗ್ರೂಪ್-2 ವಿಭಾಗದಲ್ಲಿ ಮೊದಲ ಪ್ರಯತ್ನದಲ್ಲಿ ಒಟ್ಟು 10 ವಿದ್ಯಾರ್ಥಿಗಳು ಉತ್ತಮ ಅಂಕದೊಂದಿಗೆ ಉತ್ತೀರ್ಣರಾಗಿದ್ದಾರೆ.
ಇಂಟರ್ ಮೀಡಿಯಟ್ ಗ್ರೂಪ್-02 ವಿಭಾಗದಲ್ಲಿ ಅಮೃತಾ, ಪ್ರಸ್ಮಿಯಾ, ವಿಜಯ್ ಕುಮಾರ್, ಅನಿಶಾ, ಶ್ರೇಯಾ ಸುರೇಂದ್ರ ಪೂಜಾರಿ, ಶ್ರೀನಿಧಿ, ಪೂರ್ಣ ಪೂಜಾರಿ, ರಾಮ ಕುಮಾರ್, ದಿನೇಶ್, ಅಚಿಂತ್ಯಾ ಭಾರಧ್ವಜ್, ಪೂಜಾ ಕೆ., ಶ್ರೇಜಾ, ತೇಜಸ್ವಿನಿ, ಐಶ್ವರ್ಯಾ, ಸಾಕ್ಷಿ, ವೆಂಕಟೇಶ್, ಪ್ರೀತಮ್ ಹಾಗೂ ರಶ್ಮಿತಾ ಸೇರಿದಂತೆ ಒಟ್ಟು 18 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಇಂಟರ್ ಮೀಡಿಯಟ್ ಗ್ರೂಪ್-01 ವಿಭಾಗದಲ್ಲಿ ಆಕಾಶ್ ಜೆ.ಭಟ್, ಧನ್ಯ ಜಿ.ಶೆಟ್ಟಿ, ಪ್ರಜ್ಞಾ ಪೂಜಾರಿ, ಚಿರಾಂತ್, ಜ್ಯೋತಿ ವಿ.ಬಂಗೇರ, ಶ್ರುತಿಕಾ ಶೆಟ್ಟಿ ಸೇರಿದಂತೆ 6 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿಗಳನ್ನು ಸಂಸ್ಥೆ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಪ್ರಾಂಶುಪಾಲ ಡಾ.ಕುರಿಯನ್, ವೃತ್ತಿಪರ ವಾಣಿಜ್ಯ ವಿಭಾಗದ ಸಂಯೋಜಕ ಅಶೋಕ ಕೆ.ಜಿ., ಆಳ್ವಾಸ್ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ., ಸಿ.ಎ. ಸಂಯೋಜಕರು ಅಭಿನಂದಿಸಿದ್ದಾರೆ.