ಆದರೆ ಇದನ್ನು ಸತ್ಯವೆಂದು ಭಾವಿಸಿದ ಅವರು, ಅಪರಿಚಿತ ವ್ಯಕ್ತಿ ನೀಡಿದ ಬೇರೆ ಬೇರೆ ಸ್ಕ್ಯಾನರ್ ಗಳಿಗೆ ಮತ್ತು ಖಾತೆಗಳಿಗೆ ಸೆ.24 ರಿಂದ ಡಿ.3ರ ವರೆಗೆ ಹಂತ ಹಂತವಾಗಿ ಒಟ್ಟು 33,11,000 ರೂ. ವರ್ಗಾಯಿಸಿದ್ದಾರೆ. ಅನಂತರ ಹೂಡಿಕೆ ಮಾಡಿದ ಹಣವನ್ನು ವಾಪಾಸು ನೀಡುವಂತೆ ಕೇಳಿದಾಗ ಇನ್ನೂ ಹೆಚ್ಚಿನ ಹಣ ಹೂಡಿಕೆ ಮಾಡುವಂತೆ ಹಾಗೂ ಸರ್ವೀಸ್ ಟ್ಯಾಕ್ಸ್ ಪಾವತಿ ಮಾಡುವಂತೆ ತಿಳಿಸಿದ್ದಾನೆ. ಇದರಿಂದ ಅನುಮಾನ ಬಂದು ತಮ್ಮ ಮನೆಯವರಲ್ಲಿ ಹಾಗೂ ಸ್ನೇಹಿತರಲ್ಲಿ ವಿಚಾರಿಸಿದಾಗ ಮೋಸ ಹೋಗಿರುವುದು ಖಚಿತವಾಗಿದೆ.