ಬಿಸಿನೆಸ್ ಖಾತೆಯನ್ನು ಹ್ಯಾಕ್ ಮಾಡಿ ವಂಚನೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮಂಗಳೂರು: ರೆಸಾರ್ಟ್ ಸಂಸ್ಥೆಯೊಂದರ ಗೂಗಲ್ ಬಿಸಿನೆಸ್ ಖಾತೆಯನ್ನು ಹ್ಯಾಕ್ ಮಾಡಿ ಅಪರಿಚಿತರು ವಂಚನೆ ಮಾಡುತ್ತಿರುವ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಉಳ್ಳಾಲದಲ್ಲಿರುವ ಸಮ್ಮರ್ ಸ್ಯಾಂಡ್ಸ್ ಬೀಚ್ ರೆಸಾರ್ಟ್‌ನ್ನು ಪ್ರವಾಸಿಗರು ಇಮೇಲ್, ಮೊಬೈಲ್ ನಂಬರ್‌ಗಳ ಮೂಲಕ ಸಂಪರ್ಕಿಸಿ ಮುಂಗಡವಾಗಿ ರೆಸಾರ್ಟ್ ಕಾಯ್ದಿರಿಸುತ್ತಿದ್ದರು. 2025ರ ನ.10ರಂದು ರೆಸಾರ್ಟ್ ಅಧಿಕೃತ ಗೂಗಲ್ ಬಿಸಿನೆಸ್‌ನ ಎಕ್ಸೆಸ್‌ನ್ನು ಅಪರಿಚಿತ ವ್ಯಕ್ತಿಗಳು ಪಡೆದುಕೊಂಡಿದ್ದಾರೆ. ಈ ಬಾರಿ ರೆಸಾರ್ಟ್ ಸಂಸ್ಥೆಯ ಮುಖ್ಯಸ್ಥರು ಹಲವಾರು ಬಾರಿ ಎಕ್ಸೆಸ್ ವಾಪಾಸ್ ಪಡೆಯಲು ವಿನಂತಿ ಮಾಡಿದ್ದರು. ಆದರೆ ಅದು ಸಾಧ್ಯವಾಗುತ್ತಿರಲಿಲ್ಲ. ಇದು ಮುಂದುವರಿದು 2026ನೇ ಜ.11ರಂದು ರೆಸಾರ್ಟ್‌ನ ಅಧಿಕೃತ ವೆಬ್‌ಸೈಟ್‌ನ್ನು ಯಾರೋ ಅಪರಿಚಿತ ವ್ಯಕ್ತಿಗಳು ನಕಲಿಯಾಗಿ ತೆರೆದಿರುವುದು ಕಂಡು ಬಂದಿದೆ. ಇದು ಮಾತ್ರವಲ್ಲದೆ ಸಂಪರ್ಕಕ್ಕಾಗಿ ಮೊಬೈಲ್ ಹಾಗೂ ವಿಳಾಸ ನೀಡಿರುತ್ತಾರೆ. ಇದರಿಂದ ರೆಸಾರ್ಟ್ ಬುಕ್ ಮಾಡುವ ಅಮಾಯಕ ಪ್ರವಾಸಿಗರು ಮತ್ತು ಸಾರ್ವಜನಿಕರು ನೇರವಾಗಿ ವಂಚಕರು ಮತ್ತು ನಕಲಿ ವೆಬ್‌ಸೈಟ್ ಸಂಪರ್ಕ ಹೊಂದಿಕೊಂಡು ಬೇರೆ ಬೇರೆ ಖಾತೆಗಳಿಗೆ ಮತ್ತು ಕ್ಯೂಆರ್‌ಕೋಡ್‌ಗಳಿಗೆ ರೆಸಾರ್ಟ್ ಬುಕ್ಕಿಂಗ್ ಹೆಸರಿನಲ್ಲಿ ಹಣ ಪಾವತಿಸಿದ್ದಾರೆ. ಈ ಬಗ್ಗೆ ಪ್ರವಾಸಿಗರು ರೆಸಾರ್ಟ್‌ನ ಅಧಿಕೃತ ಮುಖ್ಯಸ್ಥರು ವಿಷಯ ತಿಳಿದು ವಂಚನೆಯಾದ ಬಗ್ಗೆ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net