ಸುಬ್ರಹ್ಮಣ್ಯ: ಪಂಜ ಕ್ಷೇತ್ರದ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರ ಬ್ರಹ್ಮರಥೋತ್ಸವ ಶುಕ್ರವಾರ ರಾತ್ರಿ ನೆರವೇರಿತು. ಕೆಮ್ಮಿಂಜೆ ನಾಗೇಶ ತಂತ್ರಿ ನೇತೃತ್ವ ವಹಿಸಿದ್ದರು.
ರಾತ್ರಿ ಮಹಾಪೂಜೆ ನಂತರ ಒಳಾಂಗಣ ಉತ್ಸವ, ಹೊರಾಂಗಣ ಉತ್ಸವ ನಡೆದು, ಬಳಿಕ ವಸಂತ ಕಟ್ಟೆಪೂಜೆ ನೆರವೇರಿತು. ರಥಬೀದಿಗೆ ಶ್ರೀ ದೇವರು ಪ್ರವೇಶಿಸುವಾಗ ಮತ್ತು ದೇವರು ಬ್ರಹ್ಮರಥಾರೋಹಣರಾಗುವಾಗ ಕಾಚುಕುಜುಂಬ ದೈವದ ಭೇಟಿ ಮತ್ತು ನುಡಿಗಟ್ಟು ನೆರವೇರಿತು. ರಥಾರೋಹಣದ ಬಳಿಕ ಕಾಚುಕುಜುಂಬ ದೈವದ ನರ್ತನ ಸೇವೆ ನೆರವೇರಿತು.
ಬಳಿಕ ಮಹಾ ರಥೋತ್ಸವ, ಪಂಜ ಬೆಡಿ, ಮಹಾಪೂಜೆ, ಭೂತಬಲಿ, ಶಯನೋತ್ಸವ, ಕವಾಟಬಂಧನ ನಡೆಯಿತು. ಶಾಸಕಿ ಭಾಗೀರಥಿ ಮುರುಳ್ಯ, ಪಂಜ ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರು, ಗೌರವ ಸಲಹೆಗಾರರಾದ ಮಹೇಶ್ ಕುವಾರ್ ಕರಿಕ್ಕಳ, ಆನಂದ ಗೌಡ ಕಂಬಳ, ಉದಯ ಕುಮಾರ್ ಬೆಟ್ಟ, ಪರಮೇಶ್ವರ ಬಿಳಿಮಲೆ, ಉಮೇಶ್ ಬಳ್ಪ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಮಚಂದ್ರ ಭಟ್, ಸತ್ಯನಾರಾಯಣ ಭಟ್ ಕಾಯಂಬಾಡಿ, ಧರ್ಮಪಾಲ ಗೌಡ ಮರಕ್ಕಡ, ಸಂತೋಷ್ ಕುಮಾರ್ ರೈ ಬಳ್ಪ, ಮಾಯಿಲಪ್ಪ ಗೌಡ ಎಣ್ಮೂರು, ಧರ್ಮಣ್ಣ ನಾಯ್ಕ ಗರಡಿ, ರಾಮಚಂದ್ರ ಭಟ್, ಮಾಲಿನಿ ಕುದ್ವ, ಪವಿತ್ರಾ ಮಲ್ಲೆಟ್ಟಿ ಉಪಸ್ಥಿತರಿದ್ದರು.