ಭಕ್ತರು, ಸ್ವಯಂಸೇವಕರ ಶ್ರಮದಿಂದ ವೈಭವದ ಬ್ರಹ್ಮಕಲಶ :ಚಂದ್ರಶೇಖರ

ಸಮಿತಿ ವಿವಿಧ ಪದಾಧಿಕಾರಿಗಳ ಸಭೆಯಲ್ಲಿ ಚಂದ್ರಶೇಖರ ಬೆಲ್ಚಡ ಮಾತನಾಡಿದರು. ಸೋಂದ ಭಾಸ್ಕರ ಭಟ್, ಶ್ರೀನಿವಾಸ ಯಾನೆ ಅಪ್ಪು ಪೂಜಾರಿ, ಪ್ರಭಾಕರ ಪೂಜಾರಿ, ಕಸ್ತೂರಿ ಪಂಜ, ದಿವಾಕರ ಸಾಮಾನಿ ಇದ್ದರು.
ಸಮಿತಿ ವಿವಿಧ ಪದಾಧಿಕಾರಿಗಳ ಸಭೆಯಲ್ಲಿ ಚಂದ್ರಶೇಖರ ಬೆಲ್ಚಡ ಮಾತನಾಡಿದರು. ಸೋಂದ ಭಾಸ್ಕರ ಭಟ್, ಶ್ರೀನಿವಾಸ ಯಾನೆ ಅಪ್ಪು ಪೂಜಾರಿ, ಪ್ರಭಾಕರ ಪೂಜಾರಿ, ಕಸ್ತೂರಿ ಪಂಜ, ದಿವಾಕರ ಸಾಮಾನಿ ಇದ್ದರು.
Published on
ಹಳೆಯಂಗಡಿ: ವಿವಿಧ ಸಮಿತಿಗಳು ರಚನೆಯಾಗಿ ಕಾರ್ಯನಿರ್ವಹಿಸುತ್ತಿದ್ದು ಮುಂದಿನ ದಿನಗಳಲ್ಲಿ ದಾನಿಗಳ, ಭಕ್ತರು, ಸ್ವಯಂಸೇವಕರ ಶ್ರಮ ಹಾಗೂ ಸಹಕಾರದಿಂದ ವೈಭವದ ಬ್ರಹ್ಮಕಲಶ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಹಾಗೂ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಶೇಖರ ಬೆಲ್ಚಡ ಹೇಳಿದರು.
ಸಮಿತಿ ಕಾರ್ಯಾಲಯದಲ್ಲಿ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದಲ್ಲಿ ಮಾರ್ಚ್ 4ರಿಂದ 8ರ ವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಬ್ರಹ್ಮಕಲಶೋತ್ಸವ ಸಮಿತಿ ವಿವಿಧ ಪದಾಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಮಂಗಳವಾರ ಮಾತನಾಡಿದರು.
ಕ್ಷೇತ್ರದ ಮೊಕ್ತೇಸರ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಸಮಿತಿ ಪದಾಧಿಕಾರಿಗಳಾದ ಸೋಂದ ಭಾಸ್ಕರ ಭಟ್, ಕಸ್ತೂರಿ ಪಂಜ, ದಿವಾಕರ ಸಾಮಾನಿ, ಮುರ ಸದಾಶಿವ ಶೆಟ್ಟಿ, ಸುನೀಲ್ ಆಳ್ವ, ಗಣೇಶ್ ಹೊಸಬೆಟ್ಟು, ಗೀತಾ ಪಿ.ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net