ದೋಣಿ ಮಗುಚಿ ನಾಪತ್ತೆಯಾದಾತನ ಶವ ಪತ್ತೆ

ಬಪ್ಪನಾಡು ಬಡಗುಹಿತ್ಲು ಶಾಂಭವಿ ನದಿಯಲ್ಲಿ ದುರ್ಘಟನೆ
ಡೇನಿಯಲ್
ಡೇನಿಯಲ್
Published on: 

ಮೂಲ್ಕಿ: ಬಪ್ಪನಾಡು ಬಡಗುಹಿತ್ಲು ಶಾಂಭವಿ ನದಿಯಲ್ಲಿ ಮೀನುಗಾರಿಕೆಗೆ ನಡೆಸುವಾಗ ದೋಣಿ ಮಗುಚಿ ನಾಪತ್ತೆಯಾದ ಕೊಕ್ರಾಣಿ ನಿವಾಸಿ ಡೇನಿಯಲ್ ಜಿ.ಫುಟಾಡೊ (65) ಅವರ ಶವ ಬಡಗುಹಿತ್ಲು ಶಾಂಭವಿ ನದಿಯಲ್ಲಿ ಶುಕ್ರವಾರ ಬೆಳಗ್ಗೆ ಪತ್ತೆಯಾಗಿದೆ.

ಕೊಕ್ರಾಣಿ ನಿವಾಸಿ ಡೇನಿಯಲ್ ಜಿ.ಫುರ್ಟಾಡೊ ಹಾಗೂ ದುಬೈನಲ್ಲಿ ನೆಲೆಸಿರುವ ಸಹೋದರ ನೆಲ್ಸನ್ ಗುರುವಾರ ಸಂಜೆ ಹವ್ಯಾಸಿ ಮೀನುಗಾರಿಕೆಗೆ ಕೊಕ್ರಾಣಿ ಬಳಿಯಿಂದ ಶಾಂಭವಿ ನದಿಯಲ್ಲಿ ಸಣ್ಣ ದೋಣಿಯಲ್ಲಿ ತೆರಳಿದ್ದು, ರಾತ್ರಿ ಬಪ್ಪನಾಡು ಬಡಗುಹಿತ್ಲು ಬಳಿ ಮೀನಿಗೆ ಹಾಕಿದ ಬಲೆ ಕಲ್ಲಿಗೆ ಸಿಲುಕಿ ಬಲೆ ಎಳೆಯುವಾಗ ದೋಣಿ ಮಗುಚಿ ಬಿದ್ದು ಡೇನಿಯಲ್ ನೀರಿನ ಸೆಳೆತಕ್ಕೆ ನಾಪತ್ತೆಯಾಗಿದ್ದರು ಹಾಗೂ ಸಹೋದರ ನೆಲ್ಸನ್ ಈಜಿ ದಡ ಸೇರಿ ಅಪಾಯದಿಂದ ಪಾರಾಗಿದ್ದರು.

ರಾತ್ರಿಯಿಂದಲೇ ಹುಡುಕಾಟ ನಡೆಸಿದ್ದರೂ ಯಾವುದೇ ಫಲಪ್ರದವಾಗಿರಲಿಲ್ಲ. ಶುಕ್ರವಾರ ಬೆಳಗ್ಗೆ ಎಸ್‌ಡಿಆರ್‌ಎಫ್ ತಂಡವು ಪಿಎಸ್‌ಐ ಹಾಗೂ ಅಗ್ನಿಶಾಮಕ ದಳ ತೀವ್ರ ಹುಡುಕಾಟ ನಡೆಸಿದ್ದು ದೋಣಿ ಮಗುಚಿದ ಸ್ಥಳದಿಂದ 2 ಕಿ.ಮೀ ದೂರದಲ್ಲಿ ಶವ ಕಂಡುಬಂದಿದೆ. ಡೇನಿಯಲ್ ವಿದೇಶದಲ್ಲಿ ಉದ್ಯೋಗದಲ್ಲಿದ್ದು ಬಳಿಕ ಮುಂಬೈನಲ್ಲಿ ನಿವೃತ್ತಿ ಜೀವನ ನಡೆಸುತ್ತಿದ್ದರು. ಅವರು ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ.