ದಾಖಲೆ ರಹಿತ ಸಂಯೋಜನೆಗಿಲ್ಲ ಅನುಮತಿ : ಪ್ರೊ.ಪಿ.ಎಲ್.ಧರ್ಮ

ದ್ವಿತೀಯ ವಿಶೇಷ ಸಭೆಯಲ್ಲಿ ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ, ಪ್ರೊ.ಗಣೇಶ್ ಸಂಜೀವ, ಪ್ರೊ.ದೇವೇಂದ್ರಪ್ಪ ಉಪಸ್ಥಿತರಿದ್ದರು.
ದ್ವಿತೀಯ ವಿಶೇಷ ಸಭೆಯಲ್ಲಿ ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ, ಪ್ರೊ.ಗಣೇಶ್ ಸಂಜೀವ, ಪ್ರೊ.ದೇವೇಂದ್ರಪ್ಪ ಉಪಸ್ಥಿತರಿದ್ದರು.
Published on
ಕಾಲೇಜುಗಳಿಗೆ ಅಗ್ನಿ ನಿರೋಧಕ ವ್ಯವಸ್ಥೆ ಕಡ್ಡಾಯ ಮಾಡಿರುವ ಸರ್ಕಾರದ ನಿಯಮಕ್ಕೆ ಕಾಲೇಜು ಆಡಳಿತ ಮಂಡಳಿಗಳು ಆಕ್ಷೇಪ ವ್ಯಕ್ತಪಡಿಸಿವೆ. ಸೂಕ್ತ ದಾಖಲೆ ನೀಡದಿದ್ದರೆ ಸಂಯೋಜನೆಗೆ ಅನುಮತಿ ನೀಡಲಾಗದು ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ತಿಳಿಸಿದ್ದಾರೆ.
ಮಂಗಳೂರು ವಿಶ್ವವಿದ್ಯಾಲಯದ 2025-26ನೇ ಸಾಲಿನ ಶೈಕ್ಷಣಿಕ ಮಂಡಳಿ ಶನಿವಾರ ದ್ವಿತೀಯ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾಹಿತಿ ನೀಡಿದರು.
ವಿವಿಯಿಂದ ಶಾಶ್ವತ ಸಂಯೋಜನೆಗೆ ಅರ್ಜಿ ಸಲ್ಲಿಸಿದ 30 ಕಾಲೇಜುಗಳಿಗೆ ವಿಚಾರಣಾ ಸಮಿತಿ ಭೇಟಿ ನೀಡಿ ವರದಿ ನೀಡಿದೆ. ಯಾವುದೇ ಕಾಲೇಜುಗಳಿಗೆ ಕಟ್ಟಡ, ಫಯರ್ ಆ್ಯಂಡ್ ಸೇಫ್ಟಿಗೆ ಸಂಬಂಧಪಟ್ಟ ಭದ್ರತಾ ಪ್ರಮಾಣಪತ್ರ ಅತಿ ಮುಖ್ಯ. ಎರಡು ವರ್ಷಗಳ 204 ಕಾಲೇಜುಗಳಿದ್ದರೆ ವಿದ್ಯಾರ್ಥಿಗಳ ಕೊರತೆ 158ಕ್ಕೆ ಇಳಿಯಿತು. ಬಳಿಕ 154ಕ್ಕೆ ಬಂದು ಈಗ ಮತ್ತೆ 160 ಕಾಲೇಜುಗಳಿಗೆ ತಲುಪಿದೆ. ದಿಢೀರ್ ಅಗ್ನಿಶಾಮಕ ಭದ್ರತಾ ಪ್ರಮಾಣಪತ್ರ ಕೇಳಿದರೆ ದೊಡ್ಡ ಮೊತ್ತ ಹಣ ಬೇಕಾಗುತ್ತದೆ ಎಂದು ಕಾಲೇಜು ಆಡಳಿತ ಮಂಡಳಿಗಳು ಮಂಡಿಸಿರುವ ವಾದ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.
131 ಕಾಲೇಜುಗಳಿಂದ ಮುಂದುವರಿಕಾ ಸಂಯೋಜನೆಗೆ ಅರ್ಜಿ ಬಂದಿದ್ದು, ವಿಚಾರಣಾ ಸಮಿತಿ ಭೇಟಿ ನೀಡಿ ಪರಿಶೀಲಿಸಿ ಷರತ್ತುಗಳೊಂದಿಗೆ ಮಂಜೂರಾತಿ ನೀಡಲಾಗಿದೆ. 21 ಕಾಲೇಜುಗಳಿಗೆ ಹೆಚ್ಚುವರಿ ವಿಭಾಗ ಮತ್ತು ವಿಸ್ತರಣಾ ಸಂಯೋಜನೆಗೆ ಅನುಮತಿ ನೀಡಲಾಗಿದೆ. 28 ಕಾಲೇಜುಗಳಿಗೆ ಶಾಶ್ವತ, 11 ಕಾಲೇಜುಗಳಿಗೆ ಹೊಸ ಶಾಶ್ವತ ಸಂಯೋಜನೆ ಮಂಜೂರು ಮಾಡಲಾಗಿದೆ ಎಂದರು.

ನಾಲ್ಕು ಹೊಸ ಕಾಲೇಜುಗಳಿಗೆ ಮಂಜೂರಾತಿ

ಚರ್ಚೆಗೀಡಾದ ಕಂಕನಾಡಿ ಹಾರ್ವರ್ಡ್ ಕಾಲೇಜು

ಕಂಕನಾಡಿಯಲ್ಲಿದ್ದ ಫಯರ್ ಆ್ಯಂಡ್ ಸೇಫ್ಟಿ ಇಂಜಿನಿಯರಿಂಗ್ ಕಾಲೇಜೊಂದು ಬಲ್ಮಠ ಆರ್ಯ ಸಮಾಜ ರಸ್ತೆಗೆ ಸ್ಥಳಾಂತರಿಸಿ ಮುಂದುವರಿಕಾ ಸಂಯೋಜನೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿತ್ತು. ಸ್ಥಳಾಂತರ ಸಂದರ್ಭ ಮಂಗಳೂರು ವಿವಿ ಮತ್ತು ಸರ್ಕಾರದ ಅನುಮತಿ ಪಡೆಯದ ಬಗ್ಗೆ ವಿಚಾರಣಾ ಸಮಿತಿ ವರದಿ ನೀಡಿದೆ. ಮೂಲ ದಾಖಲೆಗಳಿಲ್ಲದೆ ಕಾಲೇಜುಗಳ ಪ್ರಸ್ತಾಪ ಕಳಿಸಲೇಬೇಡಿ ಎಂದು ಉನ್ನತ ಶಿಕ್ಷಣ ಸಚಿವರು ಸ್ಪಷ್ಟ ಸೂಚನೆ ನೀಡಿದ್ದಾರೆ. ತಿಂಗಳೊಳಗೆ ಸೂಕ್ತ ದಾಖಲೆ ನೀಡಿದರೆ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಬಹುದು ಎಂದು ಕುಲಪತಿ ತಿಳಿಸಿದರು. ಪರೀಕ್ಷಾಂಗ ಕುಲಸಚಿವ ಪ್ರೊ.ದೇವೇಂದ್ರಪ್ಪ ಉಪಸ್ಥಿತರಿದ್ದರು.

ಪಿಜಿಗೆ ಡಿಜಿಟಲ್ ಮೌಲ್ಯಮಾಪನ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net