ಅಂಧರ ಸೇವಾ ಸಂಘ 266 ನೇ ನೇತ್ರ ತಪಾಸಣೆ ಶಿಬಿರ

ಅಂಧರ ಸೇವಾ ಸಂಘದ 266ನೇ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಸುಮನ್ ಘಾಟೆ ಉದ್ಘಾಟಿಸಿದರು. ಪಿ.ರವೀಂದ್ರ ರಾವ್, ಡಾ.ದಿನಕರ ಡೋಂಗ್ರೆ, ಸುಧಾಕರ ಡೋಂಗ್ರೆ ಮೊದಲಾದವರಿದ್ದರು.
ಅಂಧರ ಸೇವಾ ಸಂಘದ 266ನೇ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಸುಮನ್ ಘಾಟೆ ಉದ್ಘಾಟಿಸಿದರು. ಪಿ.ರವೀಂದ್ರ ರಾವ್, ಡಾ.ದಿನಕರ ಡೋಂಗ್ರೆ, ಸುಧಾಕರ ಡೋಂಗ್ರೆ ಮೊದಲಾದವರಿದ್ದರು.
Published on
ಮಂಗಳೂರು: ಅಂಧರ ಸೇವಾ ಸಂಘದ ಚಟುವಟಿಕೆಗಳು ಎಲ್ಲಾ ಸಂಘ ಸಂಸ್ಥೆಗಳಿಗೂ ಒಂದು ಮಾದರಿ ಎಂದು ಕರ್ಣಾಟಕ ಬ್ಯಾಂಕ್‌ನ ನಿವೃತ್ತ ಜನರಲ್ ಮ್ಯಾನೇಜರ್ ಸುಮನ್ ಘಾಟೆ ಹೇಳಿದರು.
ಅಂಧರ ಸೇವಾ ಸಂಘ ದಕ್ಷಿಣ ಕನ್ನಡ ಮತ್ತು ಕಾರ್ಕಳ ಮಾಳ ಗುರುಕುಲ ವಿದ್ಯಾವರ್ಧಕ ಸಂಘ ಜಂಟಿ ಆಶ್ರಯದಲ್ಲಿ ಅಂಧರ ಸೇವಾ ಸಂಘದ 266ನೇ ಉಚಿತ ನೇತ್ರ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ನಿರಂತರವಾಗಿ 45 ವರ್ಷಗಳಿಂದ ಸಮಾಜ ಸೇವೆ ಮನೋಭಾವನೆಯಿಂದ ಮುನ್ನಡೆಸಿಕೊಂಡು ಬಂದ ಸಂಘದ ಪದಾಧಿಕಾರಿಗಳನ್ನು ಪ್ರಶಂಸಿಸಿದರು.
ಕಾರ್ಕಳ ತಾಲೂಕಿನಲ್ಲಿರುವ ಮಾಳ ಎಂಬ ಹಳ್ಳಿ ಪ್ರದೇಶದಲ್ಲಿ ಸುಮಾರು 75 ವರ್ಷಗಳಿಂದ ಮುನ್ನಡೆಯುತ್ತಿರುವ ಪ್ರಸ್ತು ಅಮೃತ ಮಹೋತ್ಸವ ಆಚರಿಸುತ್ತಿರುವ ವಿದ್ಯಾವರ್ಧಕ ಸಂಘದ ಸಂಚಾಲಕರನ್ನು ಹಾಗೂ ಶಾಲೆಯ ಪದಾಧಿಕಾರಿಗಳು ಹಾಗೂ ಶಿಕ್ಷಕ ವೃಂದದವರನ್ನು ಅಂಧರ ಸೇವಾ ಸಂಘದ ಕಾರ್ಯದರ್ಶಿ ಪಿ.ರವೀಂದ್ರರಾವ್ ಅಭಿನಂದಿಸಿದರು.
ಗ್ರಾಮೀಣ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಶಿಬಿರ ಏರ್ಪಡಿಸಿ ಸುಮಾರು 130 ಜನರು ಪ್ರಯೋಜನ ಪಡೆದರು. 80 ಮಂದಿಗೆ ಕನ್ನಡಕ, 40 ಮಂದಿಗೆ ಔಷಧಗಳು, ಅದರಲ್ಲಿ 10 ಮಂದಿಗೆ ಕ್ಯಾಟರ್ಯಾಕ್ಸ್ ಅಪರೇಷನ್ ನೊಂದಾಯಿಸಿಕೊಂಡರು. ಈ ಎಲ್ಲಾ ಸೇವೆ ಉಚಿತವಾಗಿ ನಡೆದಿದೆ ಎಂದರು. ಅಗತ್ಯವುಳ್ಳ ಜನರಿಗೆ ಈ ಶಿಬಿರದಿಂದ ಪ್ರಯೋಜನವಾಗಿ ನಮಗೆ ಆತ್ಮತೃಪ್ತಿ ಇದೆ ಎಂದು ರವೀಂದ್ರ ರಾವ್ ಹೇಳಿದರು.
ಆಯುಷ್ಮಾನ್ ಆಸ್ಪತ್ರೆಯ ಮುಖ್ಯಸ್ಥ ಡಾ.ದಿನಕರ ಡೋಂಗ್ರೆ ಶುಭ ಹಾರೈಸಿದರು. ಶ್ರೀ ಗುರುಕುಲ ವಿದ್ಯಾವರ್ಧಕ ಶಾಲೆಯ ಸಂಚಾಲಕ ಸುಧಾಕರ ಡೊಂಗ್ರೆ ಸ್ವಾಗತಿಸಿದರು. ಅಂಧರ ಸೇವಾ ಸಂಘದ ಪದಾಧಿಕಾರಿಗಳಾದ ಪಿ.ಎಸ್. ಶೋಭಾ ರಾವ್, ಪಿ. ಸುರೇಂದ್ರ ರಾವ್, ಅಂಬಾ ಕಾಮತ್, ಮಲಿಕಾ ಅಶೋಕ ಮಂಗಳ ಭಟ್, ಶಾಂತರಾಮ ಭಟ್, ಸುರೇಶ್ ವಕ್ರಾಡಿ, ಪಿ. ಸತೀಶ್ ರಾವ್, ಶುಭ ರಾವ್ ಹಾಗೂ ವಿಶನ್ ಆಪ್ಟಿಕಲ್ಸ್ ಮಾಲೀಕ ನಾಗಪ್ಪ ಸಹಕರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net