ರಾಜ್ಯದಲ್ಲಿ ಅಭಿವೃದ್ಧಿಯೇ ಇಲ್ಲ PUTTUR

ಬೂಡಿಯಾರ್ ರಾಧಾಕೃಷ್ಣ ರೈ ಆರೋಪ
Published on: 

ಪುತ್ತೂರು: ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚಿಸಬೇಕಾದ ಕೆಡಿಪಿ ಸಭೆ ಮೂರು ತಿಂಗಳಿಗೊಮ್ಮೆ ನಡೆಯುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ಇಲಾಖೆಗಳ ಕಾರ್ಯವೈಖರಿ ಹಾಗೂ ಅಭಿವೃದ್ಧಿ ಬಗ್ಗೆ ಮಾಹಿತಿ ಸಿಗುತ್ತಿಲ್ಲ. ೫ ಲಕ್ಷ ರೂ. ಒಳಗಿನ ಟೆಂಡರನ್ನು ಕೇವಲ ನಾಲ್ಕು ಮಂದಿಗೆ ನೀಡಲಾಗುತ್ತಿದೆ. ಅಧಿಕಾರಿಯೊಬ್ಬರ ಪತ್ನಿಗೆ ಟೆಂಡರ್ ಕೆಲಸ ನೀಡಲಾಗುತ್ತಿದ್ದು, ಭ್ರಷ್ಟಾಚಾರ ತಾಂಡವವಾಡುತ್ತಿದೆ. ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ ಆಂದೋಲನವನ್ನು ಶೇ.೫೦ರಷ್ಟು ಪಂಚಾಯಿತಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಬಿಜೆಪಿ ಜಿಲ್ಲಾ ಸಹಸಂಚಾಲಕ ಬೂಡಿಯಾರ್ ರಾಧಾಕೃಷ್ಣ ರೈ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಆಡಳಿತ ವ್ಯವಸ್ಥೆಯ ಬಗ್ಗೆ ಜನರು ರೋಸಿ ಹೋಗಿದ್ದು, ಪ್ರತಿಭಟನೆಗೆ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಹಾಲಿನ ದರ ಏರಿಕೆ ಮಾಡಲಾಗಿದೆ ಆದರೆ ಆ ಹಣ ಹೈನುಗಾರರಿಗೆ ನೀಡುತ್ತಿಲ್ಲ. ಬಸ್ ದರ ಏರಿಸಿ ಜನ ಬಸ್ ಏರದಂತೆ ಮಾಡುತ್ತಿದ್ದಾರೆ. ಹವಾಮಾನ ಆಧಾರಿತ ಬೆಳೆ ವಿಮೆಯ ಹಣವನ್ನು ಸಮರ್ಪಕವಾಗಿ ನೀಡುತ್ತಿಲ್ಲ. ಸರ್ವೇ ಇಲಾಖೆಯಲ್ಲಿ ಪೋಡಿ ಕೆಲಸ ನಡೆಯುತ್ತಿಲ್ಲ. ಗೃಹಲಕ್ಷ್ಮಿ ಹಣವನ್ನು ಸಚಿವ ಸಂಪುಟದ ಮಂತ್ರಿಗಳೇ ನುಂಗುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ವಿರೂಪಾಕ್ಷ ಮಚ್ಚಿಮಲೆ, ನಿತಿಶ್ ಶಾಂತಿವನ, ಹರಿಪ್ರಸಾದ್, ನಿರಂಜನ್ ಉಪಸ್ಥಿತರಿದ್ದರು.