

ನರೇಂದ್ರ ಮೋದಿ ಸರ್ಕಾರದ ಜನಕ್ಷೇಮ ಯೋಜನೆಗಳನ್ನು ಕೇರಳದಲ್ಲಿ ಯಥಾವತ್ ಅನುಷ್ಠಾನಗೊಳಿಸಿದರೆ ಬಿಜೆಪಿಗೆ ರಾಜಕೀಯ ಲಾಭ ಉಂಟಾಗಬಹುದೆಂಬ ಆತಂಕ ಪಿಣರಾಯಿ ವಿಜಯನ್ ಸರ್ಕಾರವನ್ನು ಕಾಡುತ್ತಿದೆ. ಹಾಗಾಗಿ ಕೇಂದ್ರ ಸರ್ಕಾರದ ಜನಪರ ಯೋಜನೆಗಳು ಕೇರಳದಲ್ಲಿ ಅನುಷ್ಠಾನಕ್ಕೆ ಬರುತ್ತಿಲ್ಲ. ಬಹುತೇಕ ಯೋಜನೆಗಳ ಹೆಸರು ಬದಲಾಯಿಸಿ ಜಾರಿಗೆ ತರುವ ಮೂಲಕ ಕೇಂದ್ರದ ಯೋಜನೆ ಹೆಸರಲ್ಲಿ ರಾಜ್ಯ ಸರ್ಕಾರ ಲಾಭ ಪಡೆಯುತ್ತಿದೆ. ಜಿಲ್ಲೆಯಲ್ಲಿ ಬಿಜೆಪಿ ಆಡಳಿತದಲ್ಲಿರುವ ಐದು ಗ್ರಾಮ ಪಂಚಾಯಿತಿಗಳಲ್ಲಿ ಅತ್ಯುತ್ತಮ ಆಡಳಿತ ನೀಡಲು ಪ್ರಯತ್ನಿಸಬೇಕಿದೆ.