ಸಾಮಾನ್ಯ ಕಾರ್ಯಕರ್ತರಿಗೂ ಅವಕಾಶ BJP

ವಿಟ್ಲದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾಧ್ಯಮದವರ ಜತೆಗೆ ಮಾತನಾಡಿದರು.
ವಿಟ್ಲದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾಧ್ಯಮದವರ ಜತೆಗೆ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಸ್ಪಷ್ಟನೆ

ವಿಟ್ಲ:ಮೋದಿಯವರ ಉಡುಪಿ ಕಾರ್ಯಕ್ರಮವಾಗಿರುವ ಕಾರಣ ಅಲ್ಲಿಯವರು ನಿಭಾಯಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯಿಂದ ಕೆಲವರಿಗೆ ಅವಕಾಶ ನೀಡಲಾಗಿದೆ. ಸಾಮಾನ್ಯರಲ್ಲಿ ಸಾಮಾನ್ಯ ಕಾರ್ಯಕರ್ತರಿಗೂ ಅವಕಾಶ ನೀಡಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ವಿಟ್ಲದಲ್ಲಿ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದರು.

ವಿಧಾನಪರಿಷತ್ ಸದಸ್ಯರ ಪತ್ನಿ ಸಮಾಜದಲ್ಲಿ ಪಕ್ಷದೊಂದಿಗೆ, ಸಂಘಟನೆಯೊಟ್ಟಿಗೆ ಇರುವಂತಹವರು. ಒಳ್ಳೆಯ ಸಂಸ್ಕಾರದಿಂದ ಬಂದಂತಹ ಕುಟುಂಬದವರಾಗಿದ್ದಾರೆ. ಅವರು ಯಾವುದೇ ಅಪರಾಧ ಹಿನ್ನೆಲೆ ಹೊಂದಿಲ್ಲ ಮತ್ತು ದರೋಡೆ ಪ್ರಕರಣವಾಗಲೀ, ದೇಶ ವಿರೋಧಿ ಕೃತ್ಯ ಎಸಗಿದ ಪ್ರಕರಣವಾಗಲೀ ಇಲ್ಲ. ಒಬ್ಬ ಸಾಮಾನ್ಯ ಮಹಿಳೆಯನ್ನು ಪ್ರಧಾನಿಯವರ ಬಳಿಗೆ ಕಳುಹಿಸಿದ್ದನ್ನು ಅನಾವಶ್ಯಕವಾಗಿ ವಿವಾದ ಮಾಡುವ ಬದಲು, ಮುಂದೆ ಇಂತಹ ಅನೇಕ ಕಾರ್ಯಕರ್ತರಿಗೆ ಅವಕಾಶ ನೀಡುವ ಕಾರ್ಯವಾಗಬೇಕೆಂಬುದು ಆಶಯ ಎಂದರು.

ಬಿಜೆಪಿಪದಾಧಿಕಾರಿಗಳಾಗಿದ್ದು, ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡವರನ್ನು ಪಕ್ಷದಿಂದ ಹೊರ ಹಾಕಲಾಗಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಭಾರತೀಯ ಜನತಾ ಪಕ್ಷದ ಮೇಲೆ ಅಭಿಮಾನವಿಟ್ಟು, ಪ್ರೀತಿಯಿಟ್ಟು, ಬಿಜೆಪಿಯ ವ್ಯವಸ್ಥೆಗೆ ಅನುಗುಣವಾಗಿ ಯಾರೆಲ್ಲಾ ಕೆಲಸ ಮಾಡುತ್ತಾರೂ ಅವರನ್ನು ಹೊರಗೆ ಹಾಕುವ ಪ್ರಶ್ನೆಯಿಲ್ಲ. ಅದರ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆಯೂ ಇಲ್ಲ. ಸಂಘಟನಾತ್ಮಕ ವ್ಯವಸ್ಥೆಯಡಿ ಕೆಲಸ ಮಾಡುವ ಎಲ್ಲರಿಗೂ ಅವಕಾಶಗಳಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net