

ಮಂಗಳೂರು: ಕರಾವಳಿ ಜಿಲ್ಲೆಯು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಪ್ರಗತಿ ಹೊಂದಲು ಅರಸು ಅವರ ಆಡಳಿತ ದೂರದೃಷ್ಟಿ ಸಹಕಾರಿಯಾಯಿತು ಎಂದು ರಾಜ್ಯ ಕನಿಷ್ಠ ವೇತನಾ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ ಶಾಹಿದ್ ಹೇಳಿದರು.
ಶಿಕ್ಷಣದಿಂದ ಯಾವುದೇ ಸಮುದಾಯವು ಮೇಲಕ್ಕೆ ಬರಲು ಸಾಧ್ಯ ಎಂಬುದನ್ನು ಮನಗಂಡ ಅರಸು ಅವರು, ಅದಕ್ಕಾಗಿ ಹಲವಾರು ಶಾಲೆಗಳನ್ನು ತೆರೆಯಲು ಕಾರಣರಾದರು. ನಗರ ಪ್ರದೇಶಗಳಲ್ಲಿ ಹಾಸ್ಟೇಲ್‌ಗಳನ್ನು ಸ್ಥಾಪಿಸುವ ಮೂಲಕ ಬಡವರು ಉನ್ನತ ಶಿಕ್ಷಣ ಕಲಿಯಲು ನಗರಗಳಿಗೆ ಬರುವಂತಾಯಿತು.