

ಹಳೆಯಂಗಡಿ: ದೇವರ ಮೇಲಿನ ವಿಶ್ವಾಸ ಜೀವನದಲ್ಲಿ ನೆಮ್ಮದಿ ಮತ್ತು ಜ್ಞಾನ ಗಳಿಕೆಗೆ ಮೂಲವಾಗಿದ್ದು, ನಾವೆಲ್ಲರೂ ದೇವರ ವಿಶ್ವಾಸಿಗಳಾಗಿ ಏಕತೆ ಸಾಧಿಸುವವರಾಗಿ ಬದುಕಬೇಕು ಎಂದು ವಿಶ್ರಾಂತ ಸಭಾಪಾಲಕ ಐಸನ್ ಪಾಲನ್ನಾ ಹೇಳಿದರು.
ಹಳೆಯಂಗಡಿ ಸಿಎಸ್‌ಐ ಅಮ್ಮನ್ ಸ್ಮಾರಕ ದೇವಾಲಯದಲ್ಲಿ ಭಕ್ತಿ ಸಂಜೀವನ ಕೂಟ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಸಂಧ್ಯಾ ಸುಪ್ರೀತಾ ಅಧ್ಯಕ್ಷತೆ ವಹಿಸಿದ್ದರು. ವಿಶೇಷ ಸಂದೇಶಕರಾಗಿ ಕೊರಂಕ್ರಪಾಡಿಯ ಸಿಎಸ್‌ಐ ಕ್ರಿಸ್ತ ಜ್ಯೋತಿ ಚರ್ಚ್ ದೇವ ಕುಮಾರ್, ಜ್ಯೂಲಿಯೆಟ್ ಟೈಟಸ್ ಮುಂಬೈ ಸಂದೇಶ ನೀಡಿದರು. ಸಾಧಕ ಧರ್ಮಗುರುಗಳಾದ ದೇವಕುಮಾರ್, ಐಸನ್ ಪಾಲನ್ನ ಅವರ ಸೇವೆಯನ್ನು ಪರಿಗಣಿಸಿ ಸನ್ಮಾನಿಸಲಾಯಿತು.
ಹಳೆಯಂಗಡಿ ಸಿಎಸ್‌ಐ ಚರ್ಚ್ ಹಿರಿಯರಾದ ರಾಹುಲ್ ಕರ್ಕಡ, ವಿಜಯ ಪ್ರಕಾಶ್ ಕರ್ಕಡ, ಜೋಸ್ಲಿನ್ ಬಂಗೇರಾ, ಮೇರಿ ಡೇನಿಯಲ್, ಡೆಲಿನ್ ನಿಶಾಲ್ ಕರ್ಕಡ, ರೆನಿಟಾ ಕರ್ಕಡ, ಪುಷ್ಪಲತಾ ಪಾಲನ್ನ, ಸುಪ್ರೀತಾ ಕರ್ಕಡ ಉಪಸ್ಥಿತರಿದ್ದರು.
ನೋಟರಿ ವಕೀಲ ಡೇನಿಯಲ್ ದೇವರಾಜ್ ಸ್ವಾಗತಿಸಿದರು. ಜೋಸೆಫ್ ಜಾನ್‌ಸನ್ ವಂದಿಸಿದರು. ಚರ್ಚ್ ಪ್ರಧಾನ ಕಾರ್ಯದರ್ಶಿ ಸುಶ್ಮಾ ಕರ್ಕಡ ಕಾರ್ಯಕ್ರಮ ನಿರೂಪಿಸಿದರು.